ವಂದೇ ಮಾತರಂ ಹಾಡುವಂತೆ ಮುಸ್ಲಿಮರ ಮೇಲೆ ಬಲವಂತ ಪಡಿಸಲಾಗದು: ಓವೈಸಿ

0
670

ಸನ್ಮಾರ್ಗ ವಾರ್ತೆ

ವಂದೇ ಮಾತರಂ ಹಾಡುವಂತೆ ಸರ್ಕಾರ ಮುಸ್ಲಿಮರ ಮೇಲೆ ಬಲವಂತ ಮಾಡಲಾಗದು ಎಂದು ಸಂಸದ ಅಸದುದ್ದೀನ್ ಓವೈಸಿ ಹೇಳಿದ್ದಾರೆ. ಬಿಜೆಪಿ ಸರ್ಕಾರವು ವಂದೇ ಮಾತರಂ ಹಾಡುವಂತೆ ಮುಸ್ಲಿಮರನ್ನು ಬಲಾತ್ಕರಿಸುವುದು ಸಂವಿಧಾನದ ವಾಕ್ ಸ್ವಾತಂತ್ರ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಓವೈಸಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ದೇಶಪ್ರೇಮವನ್ನು ಯಾವುದೋ ಒಂದು ಧರ್ಮಕ್ಕೆ ಅಥವಾ ಐಡೆಂಟಿಟಿಗೆ ಲಿಂಕ್ ಮಾಡುವುದು ಸಂವಿಧಾನದ ಮೂಲತತ್ವಕ್ಕೆ ವಿರುದ್ಧ ಮತ್ತು ಸಮಾಜವನ್ನು ವಿಭಜಿಸುವುದಕ್ಕೆ ಪೂರಕ ಎಂದು ಹೇಳಿದ್ದಾರೆ.

ಸಂವಿಧಾನವು ವಿ ದ ಪೀಪಲ್ ಎಂದು ಹೇಳಿದೆಯೇ ಹೊರತು ಯಾವುದೇ ದೇವ ಅಥವಾ ದೇವತೆಯ ಹೆಸರನ್ನು ಹೇಳಿಲ್ಲ. ಸಂವಿಧಾನದ ಪ್ರಿಯಾಂಬಲ್ ನಲ್ಲಿ ಹೇಳಲಾಗಿರುವ ಸಂಗತಿಯು ಡೆಮಾಕ್ರಸಿಯ ಆಧಾರ ಶಿಲೆಯಾಗಿದೆ. ದೇಶವು ಯಾವುದೇ ಒಂದು ಧರ್ಮದ ಆಸ್ತಿ ಅಲ್ಲ ಎಂಬುದನ್ನು ಇದು ತಿಳಿಸುತ್ತದೆ ಎಂದವರು ಹೇಳಿದ್ದಾರೆ.