ಸನ್ಮಾರ್ಗ ವಾರ್ತೆ
ಆಯುಧವನ್ನು ಕೆಳಗಿಡಬೇಕು ಎಂಬ ಬಗ್ಗೆ ಚರ್ಚೆಗೆ ತಾನು ಸಿದ್ಧ ಎಂದು ಹಮಾಸ್ ಹೇಳಿದೆ. ಗಾಝಾ ಕದನ ವಿರಾಮ ಒಪ್ಪಂದವು ಪ್ರಾಥಮಿಕ ಹಂತದಲ್ಲಿ ಇರುವ ಈ ಸಂದರ್ಭದಲ್ಲಿ ಹಮಾಸ್ನ ಈ ಹೇಳಿಕೆಗೆ ಮಹತ್ವ ಲಭಿಸಿದೆ. ತಮ್ಮ ವಶದಲ್ಲಿರುವ ಆಯುಧಗಳನ್ನು ಏನು ಮಾಡಬೇಕು ಎಂಬ ಬಗ್ಗೆ ನಾವು ಮುಕ್ತ ಮನಸ್ಸಿನ ಚರ್ಚೆಗೆ ಸಿದ್ಧವಿದ್ದೇವೆ ಎಂದು ಅಸೋಸಿಯೇಟೆಡ್ ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹಮಾಸ್ ಮುಖಂಡ ಬಾಸಿಂ ನಈಮ್ ಹೇಳಿದ್ದಾರೆ.
ಅಮೆರಿಕ ಪ್ರಸ್ತಾಪಿಸಿರುವ ಕದನ ವಿರಾಮದ ಪ್ರಕಾರ ಹಮಾಸ್ ನ ವಶದಲ್ಲಿರುವ ಆಯುಧಗಳನ್ನು ಅಂತಾರಾಷ್ಟ್ರೀಯ ನಿರೀಕ್ಷಕರ ವಶಕ್ಕೆ ಒಪ್ಪಿಸಬೇಕು. 20 ಅಂಶಗಳ ಕದನ ವಿರಾಮ ಪ್ರಸ್ತಾಪದಲ್ಲಿ ಹಮಾಸನ್ನು ನಿರಾಯುಧ ಗೊಳಿಸುವುದು ಮುಖ್ಯ ಅಂಶವಾಗಿದೆ. ಈ ಆಯುಧಗಳನ್ನು ನಾಶ ಮಾಡುವುದೋ ಸಂಗ್ರಹಿಸಿ ಇಡುವುದೋ ಅಥವಾ ಹಸ್ತಾಂತರಿಸುವುದೋ ಯಾವುದನ್ನೂ ಮಾಡಬಹುದು. ಆದರೆ ಫೆಲಸ್ತೀನಿ ಮೌಲ್ಯಗಳನ್ನು ಪಾಲಿಸಬೇಕು.
ಕದನ ವಿರಾಮ ಒಪ್ಪಂದದ ಸಮಯದಲ್ಲಿ ಒಮ್ಮೆಯೂ ಉಪಯೋಗಿಸದಂತೆ ಇದನ್ನು ಕಾಪಿಡಬೇಕು ಎಂದು ಅವರು ಹೇಳಿದ್ದಾರೆ.
ಕದನ ವಿರಾಮ ಒಪ್ಪಂದದ ಎರಡನೇ ಘಟ್ಟ ಅನುಷ್ಠಾನದ ಹತ್ತಿರದಲ್ಲಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆಯ ಬಳಿಕ ಇವರಿಂದ ಈ ಹೇಳಿಕೆ ಬಿಡುಗಡೆಗೊಂಡಿದೆ.












