ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು

0
203

ಸನ್ಮಾರ್ಗ ವಾರ್ತೆ

ಚಂಡೀಗಢ: 16 ವರ್ಷ ಪ್ರಾಯ ಪೂರ್ತಿಯಾದ ಮುಸ್ಲಿಮ್ ಹುಡುಗಿ ಮದುವೆಯಾಗಬಹುದು ಎಂದು ಮುಸ್ಲಿಂ ವೈಯಕ್ತಿಕ ಕಾನೂನಿನ ನಿರ್ದೇಶವನ್ನು ಮುಂದಿಟ್ಟು ಪಂಜಾಬ್ ಮತ್ತು ಹರಿಯಾಣ ಕೋರ್ಟು ತೀರ್ಪು ನೀಡಿದೆ. ಮುಸ್ಲಿಮ್ ಹೆಣ್ಣು ಮಕ್ಕಳಿಗೆ 16ವರ್ಷ ವಯಸ್ಸಿನಲ್ಲಿ ಸ್ವಂತ ಇಷ್ಟದ ಪ್ರಕಾರ ಮದುವೆ ಆಗಬಹುದೆಂದು ಹೈಕೋರ್ಟಿನ ಏಕಸದಸ್ಯ ಪೀಠ ತೀರ್ಪಿನಲ್ಲಿ ತಿಳಿಸಿದೆ. ಮನೆಯವರ ವಿರೋಧವನ್ನು ಲೆಕ್ಕಸಿದೆ ಮದುವೆಯಾದ ಪಠಾಣ್‍ಕೋಟ್‍ನ ಮುಸ್ಲಿಂ ದಂಪತಿಗಳ ಅರ್ಜಿಯಲ್ಲಿ ಜಸ್ಟಿಸ್ ಜಸ್ಜಿತ್ ಸಿಂಗ್ ಬೇಡಿಯವರು ನೀಡಿದ ತೀರ್ಪಿದು. ನವ ವಿವಾಹಿತ ಇವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಮುಸ್ಲಿಂ ವೈಯಕ್ತಿಕ ಕಾನೂನಿನ ಆಧಾರದಲ್ಲಿ ವಿವಾಹ ವಯಸ್ಸನ್ನು ಕೋರ್ಟು ನಿರ್ಧರಿಸಿದೆ.

ತಮ್ಮ ಕುಟುಂಬದ ಹಿತದ ವಿರುದ್ಧವಾಗಿ ಮದುವೆ ಆಗಿದ್ದಾರೆ ಎಂಬ ಕಾರಣದಿಂದ ಸಂವಿಧಾನ ನೀಡುವ ಮೂಲಭೂತ ಹಕ್ಕುಗಳನ್ನು ಅವರಿಗೆ ನಿರಾಕರಿಸಲು ಆಗುವುದಿಲ್ಲ ಎಂದು ಕೋರ್ಟು ತೀರ್ಪಿನಲ್ಲಿ ಹೇಳಿದೆ.

ದಂಪತಿಗಳಿಗೆ ಮೀಸಲಾತಿ ನೀಡಲು ತುರ್ತಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪೊಲೀಸಧಿಕಾರಿಗಳಿಗೆ ಕೋರ್ಟು ಸೂಚನೆಯನ್ನು ನೀಡಿದೆ. ಸರ್ ದಿನ್‍ಶಾ ಫದುಂಜಿ ಮುಲ್ಲಾರವ್ ಪ್ರಿನ್ಸಿಪಲ್ಸ್ ಆಫ್ ಮುಹಮ್ಮದ್ ಲಾ ಎಂಬ ಪುಸ್ತಕದ 195ನೇ ಆರ್ಟಿಕಲ್‍ನಲ್ಲಿ ಹದಿನಾರು ವರ್ಷ ದಾಟಿದ ಹುಡುಗಿ ತನ್ನ ಇಷ್ಟದಂತೆ ಜೀವನ ಸಂಗಾತಿನ್ನು ಆಯ್ಕೆ ಮಾಡಲು ಸಮರ್ಥಳು. ಗಂಡಿಗೆ 21 ವರ್ಷ ದಾಟಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಇಬ್ಬರಿಗೂ ಮದುವೆ ವಯಸ್ಸಾಗಿದೆ ಎಂದು ಕೋರ್ಟು ತಿಳಿಸಿದೆ. 2022ರ ಜನವರಿ ಎಂಟರಂದು ಇಸ್ಲಾಮೀ ಆಚಾರದಂತೆ 21 ವರ್ಷದ ಗಂಡು ಮತ್ತು ಹದಿನಾರು ವರ್ಷದ ಹುಡುಗಿ ಮದುವೆಯಾಗಿದ್ದರು. ಈ ಮದುವೆಯನ್ನು ಎರಡೂ ಕುಟುಂಬಗಳು ವಿರೋಧಿಸಿದ್ದವು.