ಅಗ್ನಿಪಥ್| ಪ್ರತಿಭಟನೆಗಳು ತಣಿದಾವೇ?: ಕೇಂದ್ರದ ಐದು ಹೊಸ ಘೋಷಣೆಗಳು

0
386

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಯುವಕರನ್ನು ನಾಲ್ಕು ವರ್ಷ ಒಪ್ಪಂದದಲ್ಲಿ ಸೈನ್ಯಕ್ಕೆ ನೇಮಿಸುವ ಅಗ್ನಿಪಥ್ ಯೋಜನೆಯ ಘೋಷಣೆಯ ಬೆನ್ನಲ್ಲೇ ಇಡೀ ದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಈ ನಡುವೆ ಕೇಂದ್ರ ಸರಕಾರ ಹೊಸ ಐದು ಘೋಷಣೆಗಳನ್ನು ಹೊರಡಿಸಿದ್ದು, ಪ್ರತಿಭಟನೆಗಳು ತಣಿದಾವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

1. ಕೋಸ್ಟ್ ಗಾರ್ಡ್, ರಕ್ಷಣಾ ಸಚಿವಾಲಯದ ಅಧೀನ ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ.10 ಮೀಸಲಾತಿ.

2. ಗೃಹ ಸಚಿವಾಲಯದ ಅಧೀನದ ಕೇಂದ್ರ ಸಶಸ್ತ್ರ ಪೊಲೀಸ್‍ನಲ್ಲಿ ಸಿಎಪಿಎಫ್, ಅಸ್ಸಾಂ ರೈಫಲ್ಸ್‌ನಲ್ಲಿ ಶೇ.10 ಮೀಸಲಾತಿ.

3. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ಅಸ್ಸಾಂ ರೈಫಲ್ಸ್‌ನ ವಯೋಮಿತಿಯಲ್ಲಿ ಸಡಿಲಿಕೆ.

4.ನೌಕಾ ಸೇನೆಯಲ್ಲಿ ಸೇವೆ ಕೊನೆಗೊಳಿಸುವ ಅಗ್ನಿವೀರರಿಗೆ ಮರ್ಚೆಂಟ್ ನೇವಿಯಲ್ಲಿ ಉದ್ಯೋಗವಕಾಶ.

5. ಅಗ್ನಿವೀರರ ವಯೋಮಿತಿ 21ರಿಂದ 23ಕ್ಕೆ ಹೆಚ್ಚಳ. ಈ ಸಡಿಲಿಕೆಗಳೆಲ್ಲ ಮೊದಲ ನೇಮಕಾತಿಗೆ ಮಾತ್ರ ಅನ್ವಯ.

ಈ ಘೋಷಣೆಗಳಲ್ಲದೆ ವಿವಿಧ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆದ್ಯತೆ ನೀಡಲು ಸಿದ್ಧವೆಂದು ಕೇಂದ್ರ ಸರಕಾರ ಹೇಳುತ್ತಿದೆ. ಹತ್ತನೆ ತರಗತಿ ಪಾಸಾದ ಅಗ್ನಿವೀರರಿಗೆ ಪಿಯುಸಿ ಪಾಸು ಕಲಿಕೆಗಾಗಿ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೆರವು ನೀಡಲಾಗುವುದೆಂದು ವರದಿಯಾಗಿದೆ.