ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ.8: ಮುಸ್ಲಿಮರು ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಾರೆ ಎಂಬುದರಲ್ಲಿ ವಾಸ್ತವಿಕತೆಗಳಿಲ್ಲ ಎಂದು ಆರೆಸ್ಸೆಸ್ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಮುಸ್ಲಿಮರು ಭಾರತೀಯ ಸಮಾಜದ ಭಾಗವಾಗಿದ್ದಾರೆ ಎಂದು ಅವರು ವಿದೇಶಿ ಮಾಧ್ಯಮಕ್ಕೆ ತಿಳಿಸಿದರು. ಮುಸ್ಲಿಮರ ಮೇಲೆ ಇರುವ ಆರೋಪ ದುರದೃಷ್ಟಕರವಾಗಿದೆ. ಸಂಘದ ಚಾಲಕ ಮೋಹನ್ ಭಾಗವತ್‌ರವರು ಹೇಳಿದಂತೆ ಕೆಲವು ಜನರು ಎಸಗಿದ ತಪ್ಪಿಗೆ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ.
ಭಾರತೀಯ ಮುಸ್ಲಿಮರ ಕಲ್ಯಾಣವನ್ನು ಸರಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಧಾರ್ಮಿಕ ತಾರತಮ್ಯವಿಲ್ಲದೆ ಭಾರತದ 130 ಕೋಟಿ ಜನರ ಕುರಿತು ಆರೆಸ್ಸೆಸ್ ಮಾತನಾಡುತ್ತದೆ.
ಈಗಿನ ಪರಿಸ್ಥಿತಿಯನ್ನು ಸಮಾಜ ಮತ್ತು ಸರಕಾರ ಒಟ್ಟುಗೂಡಿ ಎದುರಿಸಬೇಕಾಗಿದೆ. ಕೊರೋನಾ ವಿರುದ್ಧ ನಾವು ಒಟ್ಟಾಗಿ ಹೋರಾಡಬೇಕು. ಭಾಷೆ, ಧರ್ಮ, ರಾಷ್ಟ್ರೀಯತೆ, ಶಿಕ್ಷಣ, ವಂಶ, ಸಮಾಜವನ್ನು ಪರಿಗಣಿಸದ ಕೊರೋನಾ ಸಾರ್ವತ್ರಿಕ ಶತ್ರು ಆಗಿದೆ. ಇದರ ವಿರುದ್ಧ ಹೋರಾಟದಲ್ಲಿಯೂ ತಾರತಮ್ಯ ಮಾಡಬಾರದು ಎಂದು ಅವರು ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












