ಸನ್ಮಾರ್ಗ ವಾರ್ತೆ
ಎರುಮಪ್ಪೆಟ್ಟಿ(ಕೇರಳ),ಮೇ.8: ದೇವಸ್ಥಾನದಲ್ಲಿ ಭಜನೆ ನಡೆಸಲು ಒಟ್ಟು ಗೂಡಿದ್ದ ಬಿಜೆಪಿ ರಾಜ್ಯ ಸಮಿತಿ ಸದಸ್ಯನ ಸಹಿತ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಡಂಗಾಡ್ ಪಂಚಾಯತ್ನ ಕುಡಕ್ಕುಯಿ ಚೆಬ್ರಯೂರ್ ನರಸಿಂಹ ಮೂರ್ತಿ ದೇವಸ್ಥಾನದಲ್ಲಿ ಸೋಮರಾರ ಬೆಳಗ್ಗೆ ಭಜನೆ ಪ್ರವಚನಕ್ಕಾಗಿ ಒಟ್ಟು ಗೂಡಿದ್ದ ಬಿಜೆಪಿ ರಾಜ್ಯ ಸದಸ್ಯ ಎರನಾಟ್ಟಿ ಇ.ಚಂದ್ರನ್(68), ನಾರಾಯಣನ್(47), ಗೋಪಿ(58), ಸುಧನನ್(60)ರನ್ನು ಎರುಮಪೆಟ್ಟಿ ಪೊಲೀಸರು ಇನ್ಸ್ಪೆಕ್ಟರ್ ಭೂಪೇಶ್ರ ನೇತೃತ್ವದಲ್ಲಿ ಬಂಧಿಸಿದ್ದಾರೆ.
ಭಜನೆ ವಿಷಯ ತಿಳಿದು ಪೊಲೀಸರು ಬಂದಿದ್ದಾರೆಂದು ಅರಿತ ದೇವಸ್ಥಾನದಲ್ಲಿದ್ದ ಇತರರು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












