ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 25: ಮಾಜಿ ಅಮೆರಿಕ ಅಧ್ಯಕ್ಷ ಜಾನ್ ಕಾರ್ಟರ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ ನೋಡಿದ ಇಂಡಿಯವನ್ನು ಡೊನಾಲ್ಡ್ ಟ್ರಂಪ್ ನೋಡಿದ್ದಲ್ಲ ಎಂದು ರಿಲಯನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಮುಖೇಶ್ ಅಂಬಾನಿ ಹೇಳಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ರೊಂದಿಗೆ ನಡೆಸಿದ ಚಾಟ್ ಶೋನಲ್ಲಿ ಅಂಬಾನಿ ಈ ಹೇಳಿಕೆ ನೀಡಿದರು. ಮೈಕ್ರೊಸಾಫ್ಟ್ ಫ್ಯೂಚರ್ ಡಿಕೊಡಡ್ ಸಿಇಒ ಸಮ್ಮಿಟ್ನಲ್ಲಿ ಇಬ್ಬರು ಮಾತಾಡುತ್ತಿದ್ದರು.
ನಾವಿಬ್ಬರೂ ಮಾತಾಡುತ್ತಿರುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ಮದಾಬಾದಿಗೆ ತಲುಪಿದ್ದಾರೆ. ಮಾಜಿ ಅಮೆರಿಕ ಅಧ್ಯಕ್ಷರಾದ ಜಾನ್ ಕಾರ್ಟರ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ ನೋಡಿದ ಭಾರತವನ್ನು ಟ್ರಂಪ್ ನೋಡಿದ್ದಾಗಿರಲಿಕ್ಕಿಲ್ಲ. ಟ್ರಂಪ್ 2020ರ ಭಾರತವನ್ನು ನೋಡುತ್ತಿದ್ದಾರೆ. ಇಂದು ಕೋಟ್ಯಂತರ ಭಾರತೀಯರಲ್ಲಿ ಪ್ರತಿಯೊಬ್ಬರು ಸ್ವಂತ ಫೋನ್ ಹೊಂದಿದ್ದಾರೆ. ಈಗ ಭಾರತದ ಮೊಬೈಲ್ ನೆಟ್ವರ್ಕ್ ತುಂಬ ಬಲಿಷ್ಠವಾಗಿದೆ. ಅದು ವಿಶ್ವದ ದೇಶಗಳೊಂದಿಗೆ ಸ್ಪರ್ಧಿಸುತ್ತಿದೆ ಎಂದು ಅಂಬಾನಿ ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಮೈಕ್ರೋಸಾಫ್ಟ್ ದೊಡ್ಡ ಸಾಧನೆ ಮಾಡಿದೆ. ಅದರಲ್ಲಿ ಸತ್ಯ ನದೆಲ್ಲ ಪ್ರಧಾನ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವ ಸಾಮರ್ಥ್ಯವನ್ನು ಅಂಬಾನಿ ಅಭಿನಂದಿಸಿದರು. ರಿಲಯನ್ಸ್ ಒಂದು ಸ್ಟಾರ್ಟ್ ಅಪ್ ಆಗಿ ಆರಂಭಿಸಿದ್ದಾಗಿತ್ತು. ಐವತ್ತು ವರ್ಷದ ಹಿಂದೆ ಒಂದು ಕುರ್ಚಿ ಮೇಜು ಮತ್ತು ಸಾವಿರ ರೂಪಾಯಿಯೊಂದಿಗೆ ತನ್ನ ತಂದೆ ಧೀರೂಭಾಯ್ ಅಂಬಾನಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದು ಮೈಕ್ರೋ ಇಂಡಸ್ಟ್ರಿಯಾಯಿತು. ನಂತರ ಸ್ಮಾಲ್ ಮೀಡಿಯ ಇಂಡಸ್ಟ್ರೀ ಆಯಿತು. ಈಗ ನಾವು ಒಂದು ದೊಡ್ಡ ಇಂಡಸ್ಟ್ರೀಯಾಗಿ ಬೆಳೆದೆವು. ಭಾರತದ ಪ್ರತಿಯೊಬ್ಬ ಸಣ್ಣ ಉದ್ಯಮಿಗೂ ಧಿರೂ ಬಾಯಿ ಅಂಬಾನಿಯೋ, ಬಿಲ್ಗೇಟ್ಸೋ ಆಗಲು ಸಾಧ್ಯವಿದೆ ಎಂದು ಮುಖೇಶ್ ಅಂಬಾನಿ ಹೇಳಿದರು.












