ಲವ್ ಜಿಹಾದ್ ಹೆಸರಿನ ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಮಸೂದೆಗೆ ಸಹಿ ಹಾಕದಂತೆ ಗುಜರಾತ್ ರಾಜ್ಯಪಾಲರಿಗೆ ಎನ್‍ಎಪಿಎಂ ಮನವಿ

0
685

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಲವ್‍ಜಿಹಾದ್ ಹೆಸರಿನಲ್ಲಿ ಗುಜರಾತ್ ಸರಕಾರ ಪಾಸು ಮಾಡಿದ ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದೆ ಮತ್ತು ಮಹಿಳೆಯರ ಹಕ್ಕುಗಳನ್ನು ನಿಷೇಧಿಸುತ್ತದೆ ಹಾಗೂ ಧಾರ್ಮಿಕ ಧ್ರುವೀಕರಣಗೊಳಿಸುತ್ತದೆ ಎಂದು ನ್ಯಾಶನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್‍ಮೆಂಟ್(ಎನ್‍ಎಪಿಎಂ) ಹೇಳಿದೆ. ಮಸೂದೆಗೆ ಸಹಿ ಹಾಕಬಾರದೆಂದು ಎನ್‍ಎಪಿಎಂ ರಾಜ್ಯಪಾಲ ಆಚಾರ್ಯ ದೇವವ್ರತರಿಗೆ ಮನವಿ ಸಲ್ಲಿಸಿದೆ.

ಹಿಂದುತ್ವ ಶಕ್ತಿಗಳು ಸೃಷ್ಟಿಸಿದ ಲವ್ ಜಿಹಾದ್ ಎಂಬ ಸುಳ್ಳು ಪ್ರಚಾರದ ಹೆಸರಿನಲ್ಲಿ ಇಂತಹದೊಂದು ಕಾನೂನು ಪಾಸು ಮಾಡಲಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ ಎಂದು ಮನವಿಯಲ್ಲಿ ಬೆಟ್ಟು ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟು ನಡೆಯುವ ಕೋಮುವಾದಿ ಪ್ರಚಾರಕ್ಕೆ ಕಾನೂನಿನ ಸಿಂಧುತ್ವ ನೀಡಲು ಮಾನ್ಯತೆ ಕೊಡಲು ಮಸೂದೆ ಪಾಸು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದೇವ್ ದೇಸಾಯಿ ಹೇಳಿದರು.