ಪ್ರತಿಯೊಬ್ಬ ಪಂಜಾಬಿಯೂ ರೈತರನ್ನು ಬೆಂಬಲಿಸಬೇಕು: ಮನೆ ಮೇಲೆ ಕಪ್ಪು ಬಾವುಟ ಹಾರಿಸಿದ ಸಿಧು

0
514

ಸನ್ಮಾರ್ಗ ವಾರ್ತೆ

ಪಾಟಿಯಾಲ: ಪ್ರತಿಯೊಬ್ಬ ಪಂಜಾಬಿಯೂ ರೈತರನ್ನು ಬೆಂಬಲಿಸಬೇಕೆಂದು ಮಾಜಿ ಭಾರತ ಕ್ರಿಕೆಟ್ ಪಟು ಕಾಂಗ್ರೆಸ್ ನಾಯಕ ನವ್‍ಜೋತ್ ಸಿಂಗ ಸಿಧು ಹೇಳಿದ್ದಾರೆ. ದಿಲ್ಲಿ ಗಡಿಯಲ್ಲಿ ರೈತ ಹೋರಾಟ ಮುಂದುವರಿದಿದ್ದು, ನಾಳೆಗೆ ಆರು ತಿಂಗಳು. ಈ ಹಿನ್ನೆಲೆಯಲ್ಲಿ ನವ್‍ಜೋತ್ ಸಿಂಗ್ ಸಿಧು ಬೆಂಬಲವನ್ನು ಈ ರೀತಿ ವ್ಯಕ್ತಿ ಪಡಿಸಿ ಎಲ್ಲರೂ ರೈತರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ರೈತ ವಿರೋಧಿ ಕರಾಳ ಕಾನೂನು ಹಿಂದೆತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮನೆಯ ಮೇಲೆ ಸಿಧು ಕಪ್ಪು ಬಾವುಟ ಹಾರಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ಆದಾಯ ಕಡಿಮೆಯಾಗಿ ಸಾಲ ಹೆಚ್ಚುತ್ತಿದ್ದು ಈ ಪರಿಸ್ಥಿತಿಯಲ್ಲಿ ರೈತನ ಕಷ್ಟ ಹೆಚ್ಚಾಗಿದೆ. ಹೊಸ ಮೂರು ಕಾನೂನುಗಳು ಅವರ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಿರುತ್ತವೆ ಎಂದು ಕಪ್ಪು ಬಾವುಟ ಹಾರಿಸಿದ ಬಳಿಕ ಸಿಧು ಹೇಳಿದರು. ಪತ್ನಿ ಮತ್ತು ಮಾಜಿ ಶಾಸಕಿ ನವ್‍ಜೊತ್ ಕೌರ್ ಕೂಡ ಸಿಧುರ ಜೊತೆಗಿದ್ದರು.

ರೈತರ ವಿರುದ್ಧ ಕರಾಳ ಕಾನೂನನ್ನು ನಾನು ವಿರೋಧಿಸುತ್ತೇನೆ. ನನ್ನ ರೈತ ಸಹೋದರರ ಜೊತೆ ನಿಲ್ಲುತ್ತೇನೆ. ಈ ಕಪ್ಪು ಬಾವುಟವನ್ನು ಪ್ರತಿಭಟನಾ ಸೂಚಕವಾಗಿ ಹಾರಿಸುತ್ತಿದ್ದೇನೆ. ಪ್ರತಿಯೊಬ್ಬ ಪಂಜಾಬಿಯೂ ಕಡ್ಡಾಯವಾಗಿ ರೈತರನ್ನು ಬೆಂಬಲಿಸಬೇಕೆಂದು ಕಪ್ಪು ಬಾವುಟ ಹಾರಿಸಿದ ವೀಡಿಯೊದ ಜೊತೆ ಟ್ವೀಟ್ ಮಾಡಿದ್ದಾರೆ.