ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈಬರ್ ಅಪರಾಧಗಳ ಹೆಚ್ಚಳ

0
394

ಸನ್ಮಾರ್ಗ ವಾರ್ತೆ

ಸಿಂಗಾಪುರ: ಕೊರೋನದ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿದೆ. ಇಂಟರ್ನೆಟ್ ಉಪಯೋಗದ ಮರೆಯಲ್ಲಿ ಅಪರಾಧಗಳು ನಡೆಯುತ್ತಿದೆ. ಸೈಬರ್ ಕ್ರಿಮಿನಲ್ ಮುಖ್ಯವಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡಿದೆ. ಸೈಬರ್ ದಾಳಿಯಿಂದಾಗಿ ಬಳಕೆದಾರರಲ್ಲಿ ವಿಶ್ವಾಸ ಇಲ್ಲದ ಮತ್ತು ಆರ್ಥಿಕ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ ಎಂದು ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಗಳಿಂದ ಬಹಿರಂಗವಾಗಿದೆ.

ಸೈಬರ್ ದಾಳಿಗಳಿಗೆ ಇದುವರೆಗೆ ಬ್ಯಾಂಕ್ ರೇಟಿಂಗಿನಲ್ಲಿ ಕಡಿಮೆ ಪರಿಣಾಮವಾಗಿದೆ ಆದರೆ ಇದು ಮುಂದುವರಿದರೆ ವಿಷಯ ಬಿಗಡಾಯಿಸಬಹುದು ಎಂದು ಕ್ರೆಡಿಟ್ ಅನಾಲಿಸ್ಟ್ ಐರಿನ ವೇಲೈವ್ ಹೇಳುತ್ತಾರೆ. ಬ್ಯಾಂಕ್‍ಗಳು ಇತರ ಹಣಕಾಸು ಸಂಸ್ಥೆಗಳ ಮೇಲೆ ಹೊಸ ಪರಿಸ್ಥಿತಿಯಲ್ಲಿ ಸೈಬರ್ ಅಪರಾಧಿಗಳು ಕಾರ್ಯ ನಿರತರಾಗುತ್ತಿದ್ದಾರೆ. ಇಷ್ಟರವರೆಗಿನ ಅನುಭವದಿಂದ ಅದಕ್ಕೆ ಪ್ರತಿರೋಧ ಒಡ್ಡುವ ಕೆಲಸ ಆಗದಿದ್ದರೆ ಈ ಕ್ಷೇತ್ರದಲ್ಲಿ ಸೈಬರ್ ಅಪರಾಧ ಕೃತ್ಯ ಹೆಚ್ಚಳವಾಗಬಹುದು ಎಂದು ಇದೇ ಕ್ಷೇತ್ರದವರು ಹೇಳುತ್ತಾರೆ.