10 ಮಕ್ಕಳಲ್ಲಿ ಒಬ್ಬರು ಬಾಲಕಾರ್ಮಿಕರು: ವಿಶ್ವಸಂಸ್ಥೆ ವರದಿ

0
422

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಕೊರೋನದ ಆಘಾತದಲ್ಲಿ ಬಾಲಕಾರ್ಮಿಕರು ಹೆಚ್ಚಳವಾಗಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದೆ. ಎರಡು ದಶಕಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ತೀವ್ರ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಕೊರೋನ ಸೃಷ್ಟಿಸಿದ ಬಿಕ್ಕಟ್ಟು ಲಕ್ಷಾಂತರ ಮಕ್ಕಳು ಕೆಲಸ ಮಾಡುವುದಕ್ಕೆ ನಿರ್ಬಂಧಿಸಲ್ಪಟ್ಟಿದ್ದು, ಯೂನಿಸೆಫ್ ನ ಅಂಕಿ ಅಂಶಗಳ ಪ್ರಕಾರ 10 ಮಕ್ಕಳಲ್ಲಿ ಒಬ್ಬರು ಬಾಲಕಾರ್ಮಿಕರಿದ್ದಾರೆ ಎಂದು ಹೇಳಿದೆ. 2020ರಲ್ಲಿ ಬಾಲಕಾರ್ಮಿಕರ ಸಂಖ್ಯೆ ಹದಿನಾರು ಕೋಟಿ.

ಕೊರೋನ ಹಾವಳಿ ಮುಂಚೆಯೇ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಿತ್ತು. ಕೊರೊನ ಬಿಕ್ಕಟ್ಟು ಅದನ್ನು ಇನ್ನೂ ಹೆಚ್ಚಿಸಿದೆ. ವಿಶ್ವದಲ್ಲಿ ಹತ್ತರಲ್ಲಿ ಒಬ್ಬರಂತೆ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಬಾಲಕಾರ್ಮಿಕರು ಅತ್ಯಂತ ಹೆಚ್ಚು ಆಫ್ರಿಕನ್ ದೇಶಗಳಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಡತನದ ತೆಕ್ಕೆಯೊಳಗಾದ ಕುಟುಂಬಗಳ ಚೇತರಿಕೆ ಆಗದಿದ್ದರೆ ಎರಡು ವರ್ಷದಲ್ಲಿ ಬಾಲಕಾರ್ಮಿಕರಾಗಲು ಇನ್ನೂ ಐದು ಕೋಟಿ ಮಕ್ಕಳು ನಿರ್ಬಂಧಿತರಾಗುವರೆಂದು ವಿಶ್ವಸಂಸ್ಥೆ ಹೇಳುತ್ತಿದೆ.

ಮಕ್ಕಳು ಕೆಲಸ ಮಾಡದಂತೆ ತಡೆಯುವ ಹೋರಾಟದಲ್ಲಿ ನಾವು ತಪ್ಪಿದೆವು ಎಂದು ಯುನಿಸೆಫ್ ಮುಖ್ಯಸ್ಥ ಹೆಂಟೀಟ್ ಫೊರೆ ಹೇಳಿದರು. ಕೊರೊನ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿತು. ವಿವಿಧ ದೇಶಗಳಲ್ಲಿ ಎರಡನೆ ಲಾಕ್‍ಡೌನ್ ಎದುರಿಸುತ್ತಿರುವ ಮಕ್ಕಳು ಇಂತಹ ಸಮಸ್ಯೆ ಎದುರಿಸಿದ್ದು ಅಲ್ಲಿನ ಆರ್ಥಿಕ ವ್ಯವಸ್ಥೆ ಏರು ಪೇರಾಗಿದೆ. ಕುಟುಂಬದ ಬಜೆಟ್‍ನಲ್ಲಿ ಸಂಕಟ ತಲೆದೋರಿತು. ಇದರೊಂದಿಗೆ ಮಕ್ಕಳನ್ನೂ ಕುಟುಂಬಗಳು ಕೆಲಸ ಮಾಡಲು ನಿರ್ಬಂಧಿಸುವಂತಾಯಿತೆಂದು ವಿಶ್ವಸಂಸ್ಥೆ ಕಾರಣ ತಿಳಿಸಿದೆ.