ನೀವು ಜನಸಂಖ್ಯೆಯನ್ನು ನಿಯಂತ್ರಿಸಿದರೆ ಸಾಮಾಜಿಕ ಭೀತಿಗೆ ಪರಿಹಾರ ಸಿಗಬಹುದು: ವಲಸೆ ಬಂದ ಮುಸ್ಲಿಮರುನ್ನುದ್ದೇಶಿಸಿ ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ

0
199

ಸನ್ಮಾರ್ಗ ವಾರ್ತೆ

ದಿಸ್​ಪುರ್(ಅಸ್ಸಾಂ): ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ನೀಡಿರುವ ಹೇಳಿಕೆಯೊಂದು ಸದ್ಯ ವಿವಾದಕ್ಕೆ ಎದೆ ಮಾಡಿಕೊಟ್ಟಿದೆ. ಅಸ್ಸಾಂನ ವಲಸೆ ಬಂದ ಮುಸ್ಲಿಮರು ಕುಟುಂಬ ಯೋಜನೆಗಳನ್ನು ಅನುಸರಿಸಿದರೆ ಮತ್ತು ನಿಮ್ಮ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಭೂ ಅತಿಕ್ರಮಣದಂತಹ ಸಾಮಾಜಿಕ ಭೀತಿಗಳನ್ನು ಪರಿಹರಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಅಸ್ಸಾಂ ನಲ್ಲಿ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದು, ರಾಜಕೀಯ ಪಕ್ಷಗಳು ಮುಖ್ಯಮಂತ್ರಿಯವರ ಈ ಹೇಳಿಕೆಯು ಅಲ್ಪಸಂಖ್ಯಾತ ಮುಸ್ಲಿಮರನ್ನು ಅವಹೇಳಿಸುವಂಥದ್ದು ಎಂದು ಟೀಕಿಸಿದೆ.

ನಿಮ್ಮ ಜನಸಂಖ್ಯೆ ಸ್ಫೋಟ ಮುಂದುವರಿದರೆ, ಒಂದು ದಿನ ನೀವು ಕಾಮಖ್ಯ ದೇವಾಲಯ(ಅಸ್ಸಾಂ ನ ಪ್ರಸಿದ್ಧ ಯಾತ್ರಾ ಕೇಂದ್ರ) ದ ಭೂಮಿಯನ್ನು ಕೂಡ ನೀವು ಅತಿಕ್ರಮಿಸಬಹುದು. ನನ್ನ ಮನೆ ಕೂಡ ಅತಿಕ್ರಮಣಗೊಳ್ಳಲೂಬಹುದು. ಆದ್ದರಿಂದ ನೀವುಗಳು ಕುಟುಂಬ ಯೋಜನೆಗಳನ್ನು ಅನುಸರಿಸಿದರೆ ಮತ್ತು ನಿಮ್ಮ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಭೂ ಅತಿಕ್ರಮಣದಂತಹ ಸಾಮಾಜಿಕ ಭೀತಿಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಅಸ್ಸಾಂನ ಸ್ಥಳೀಯ ಸಮುದಾಯಗಳನ್ನು ಅವರ ವಿರುದ್ಧ ರಕ್ಷಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ನಾವು ಈಗಾಗಲೇ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಆದರೆ ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಕೂಡ ಹೇಳಿದ್ದಾರೆ. 126 ವಿಧಾನಸಭಾ ಸೀಟುಗಳ ಪೈಕಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ 75 ಸೀಟು ಗೆದ್ದು ಅಧಿಕಾರ ಗಳಿಸಿತ್ತು.

ರಾಜ್ಯ ಸರಕಾರದ ಜನಸಂಖ್ಯಾ ನೀತಿಯನ್ನು ರೂಪಿಸಿದಾಗ, ನಾವು ಅದನ್ನು ಎಂದಿಗೂ ವಿರೋಧಿಸಲಿಲ್ಲ. ಮುಖ್ಯಮಂತ್ರಿಯವರ ಈ ಹೇಳಿಕೆಯು ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಎಐಯುಡಿಎಫ್ ಪ್ರಧಾನ ಕಾರ್ಯದರ್ಶಿ ಮತ್ತು ಮಂಚಾಚಾರ್ ಕ್ಷೇತ್ರದ ಶಾಸಕ ಅನಿಮುಲ್ ಇಸ್ಲಾಂ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here