ಸನ್ಮಾರ್ಗ ವಾರ್ತೆ
ಲಕ್ನೊ: ಉತ್ತರಪ್ರದೇಶದ ಲಕೀಂಪುರದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರನ್ನು ಹರಿಸಿ ಮಾರಣಹೋಮ ಮಾಡಿದ ಘಟನೆಯ ಹೊಸ ವೀಡಿಯೊ ದೃಶ್ಯಗಳು ಹೊರ ಬಂದಿವೆ. ಸ್ಪಷ್ಟವಾಗಿ ಹಿಂಬದಿಯಿಂದ ಸಿಖ್ ರೈತರ ಮೇಲೆ ಅತೀ ವೇಗದಿಂದ ಕಾರು ಗುದ್ದುವುದು ದೃಶ್ಯದಲ್ಲಿ ಕಾಣುತ್ತಿದೆ. ಎಂಟು ಮಂದಿ ಘಟನೆಯಲ್ಲಿ ಕೊಲ್ಲಲ್ಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರ ಕುಟುಂಬದ ಕಪ್ಪು ಎಸ್‍ಯುವಿ ಅತೀ ವೇಗದಲ್ಲಿ ಬಂದು ರೈತರ ಮೇಲೆ ಹರದಿದೆ. ಇದರ ಹಿಂದೆ ಮತ್ತೆರಡು ವಾಹನಗಳು ಕೂಡ ಚಲಿಸಿವೆ.
ರೈತರು ವಾಹನದ ಮೇಲೆ ಮುಗಿಬಿದ್ದರೆಂದು ಕೇಂದ್ರ ಸಚಿವ ಹೇಳುತ್ತಿದ್ದು ಈ ವೀಡಿಯೊ ಸ್ಪಷ್ಟವಾಗಿ ಸಾರಸಗಟಾಗಿ ಸಚಿವರು ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತುಪಡಿಸುತ್ತಿದೆ. ತನ್ನ ಮಗ ಅಲ್ಲಿರಲಿಲ್ಲ ಎಂದು ಸಚಿವ ಹೇಳಿದ್ದಾನೆ. ಢಿಕ್ಕಿಗೆ ನಾಲ್ಕು ಮಂದಿ ತಕ್ಷಣ ಮೃತಪಟ್ಟರು. ನಂತರ ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಈ ನಡುವೆ ಲಕೀಂಪುರ ಖೇರಿಯಲ್ಲಿ ರೈತರ ಕೊಲೆಗೆ ಸುಪ್ರೀಂಕೋರ್ಟು ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದ್ದು ಇಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಚೀಫ್ ಜಸ್ಟಿಸ್ ಎನ್.ವಿ ರಮಣ ಅಧ್ಯಕ್ಷತೆಯ ಮೂವರು ಜಡ್ಜ್‌ಗಳಿರುವ ಪೀಠದಲ್ಲಿ ವಿಚಾರಣೆಗೆ ಬರಲಿದೆ.
ಸುಪ್ರೀಂ ಕೋರ್ಟ್ ಮೇಲ್ನೋಟದಲ್ಲಿ ಘಟನೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಉತ್ತರ ಪ್ರದೇಶದ ಇಬ್ಬರು ವಕೀಲರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ದಾಖಲಿಸಿದ್ದಾರೆ. ಇದಲ್ಲದೆ ಸುಪ್ರೀಂ ಕೋರ್ಟು ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದೆ. ಉ.ಪ್ರದೇಶ ಸರಕಾರದಿಂದ ವಿವರಣೆಯನ್ನು ಕೊರ್ಟು ಕೇಳಬಹುದು. ರೈತರ ಕೊಲೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ವೇಳೆ ಕೋರ್ಟು ಮಧ್ಯಪ್ರವೇಶಿಸಿದೆ.
The clearest video of Lakhimpur Kheri incident yet
Farmers were walking peacefully and the car violently comes and runs them over. Very Shocking. pic.twitter.com/3kkBYn8lVE
— Dhruv Rathee 🇮🇳 (@dhruv_rathee) October 6, 2021












