ಸನ್ಮಾರ್ಗ ವಾರ್ತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಾಖಂಡ್ಗೆ ಭೇಟಿ ನೀಡಲಿದ್ದು, ಪಿಎಂ ಕೇರ್ಸ್ ನಿಧಿಯಿಂದ ನಿರ್ಮಿಸಲಾದ 35 ಪ್ರೆಶರ್ ಸ್ವಿಂಗ್ ಹೀರಿಕೊಳ್ಳುವಿಕೆಯ ಆಮ್ಲಜನಕ ಸ್ಥಾವರಗಳನ್ನು (35 Pressure Swing Adsorption (PSA) oxygen plants) ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ರಿಶಿಕೇಶದಲ್ಲಿರುವ ಏಮ್ಸ್ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.












