ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್: ಸಿಟಿ ಮೇಯರ್ ಝೋಹ್ರಾನ್ ಮಮ್ದಾನಿ ನವರಾತ್ರಿ ಆಚರಣೆಯಲ್ಲಿ ಪಾಲ್ಗೊಂಡು ಗರ್ಬಾ ನೃತ್ಯ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅವರು ದೇವಸ್ಥಾನಕ್ಕೂ ಭೇಟಿ ನೀಡಿದ್ದು ಅಲ್ಲಿ ಅರ್ಚಕರಿಂದ ಆಶೀರ್ವಾದ ಪಡೆದಿದ್ದಾರೆ.
ಮಮ್ದಾನಿ ಎಕ್ಸ್ನಲ್ಲಿ “ಈ ವಾರ, ನಮ್ಮ ಹಿಂದೂ ನೆರೆಹೊರೆಯವರು ನವರಾತ್ರಿ ಹಬ್ಬದ ಸಂದರ್ಭದಲ್ಲಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನಮ್ಮ ಗರ್ಬಾ ನೃತ್ಯ ಮಾಡುತ್ತಾರೆ, ಸಿಂಧೂರ್ ಖೇಲಾದೊಂದಿಗೆ ದುರ್ಗಾ ದೇವಿಯನ್ನು ಆರಾಧಿಸುತ್ತಾರೆ, ಹಿರಿಯರಿಂದ ಟಿಕಾ ಆಶೀರ್ವಾದ ಪಡೆಯುತ್ತಾರೆ, ತಮ್ಮ ಮನೆಗಳಲ್ಲಿ ಗೊಂಬೆಗಳನ್ನು (ಗೋಲು) ಜೋಡಿಸುತ್ತಾರೆ.” ಎಂದು ಬರೆದಿದ್ದಾರೆ.
ಮಮ್ದಾನಿ ಅವರ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸಿ ಶುಭ ಹಾರೈಸಿದ್ದಾರೆ. ದುರ್ಗಪೂಜೆ, ನವರಾತ್ರೆ ಆಚರಣೆಯ ಪ್ರಯುಕ್ತ ವಿವಿಧ ಹಿಂದೂ ಸಂಘಟನೆಗಳು ಅಮೆರಿಕಾದ ಹಲವಾರು ಪ್ರದೇಶಗಳಲ್ಲಿ ಕಾರ್ಯಕ್ರಮಗಳ್ನು ಆಯೋಜಿಸಿವೆ.












