ಕೇರಳಕ್ಕೆ ನಿಫಾ ಮತ್ತೆ ಬಂತ: ಆತಂಕದಲ್ಲಿ ಕೋಝಿಕ್ಕೊಡ್ ಜನತೆ

0
360

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಸೆ.12: ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಜ್ವರ ಬಂದು ಇಬ್ಬರು ಮೃತಪಟ್ಟ ನಂತರ ಮತ್ತೊಮ್ಮೆ ಕೇರಳಕ್ಕೆ ನಿಫಾ ವೈರಾಣು ಪ್ರವೇಶಿಸಿತೇ ಎಂಬ ಸಂದೇಹ ಸೃಷ್ಟಿಯಾಗಿದ್ದು ಜಿಲ್ಲೆಯಲ್ಲಿ ಜಾಗೃತೆಯನ್ನು ವಹಿಸಲು ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ಮೃತರ ದೇಹದ ಗಂಟಲ ರಸದ ಸ್ಯಾಂಪಲಿನ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ ಅಷ್ಟೇ ಸಿಗಲಿದ್ದು ನಂತರ ಇದು ನಿಫಾವೇ ಸಾಮಾನ್ಯ ರೋಗವೇ ಎಂದು ನಿರ್ಧರಿಸಬಹುದಾಗಿದೆ. ಮೃತರಾದ ಒಬ್ಬ ವ್ಯಕ್ತಿ ನಾಲ್ಕು ಮಂದಿ ಸಂಬಂಧಿಕರು ತೀವ್ರ ನಿಗಾ ಉಪಚಾರ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಹೆಚ್ಚಿನ ವಿವರಗಳನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಲು ಹೋಗಿಲ್ಲ. ರೋಗಿಗಳೊಂದಿಗೆ ಬೆರೆತಿದ್ದವರಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮತ್ತು ಸಂಬಂಧಿಕರು ನಿರೀಕ್ಷಣೆ ನಡೆಸುತ್ತಿದ್ದಾರೆ. ಮೃತಪಟ್ಟಿದ್ದ ಮೊದಲ ವ್ಯಕ್ತಿಯ ಒಂಬತ್ತು ವರ್ಷದ ಮಗ ಸಹಿತ ಇಬ್ಬರು ಮತ್ತು ಸಹೋದರಿಯ ಗಂಡನಿಗೂ ಅವರ ಮಗನಿಗೂ ಇದೇ ರೀತಿಯ ರೋಗ ಲಕ್ಷಣಗಳು ಗೋಚರಿಸಿದೆ. ಒಂಬತ್ತು ವರ್ಷದ ಹುಡುಗನ ಸ್ಯಾಂಪಲನ್ನು ಮಂಗಳವಾರ ಪುಣೆಯ ವೈರಾಲಜಿಯ ಇನ್ಸಿಟಿಟ್ಯೂಟಿಗೆ ಕಳುಹಿಸಲಾಗುವುದು.

ಮೊದಲ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಬಂದ ಸಂದರ್ಶಕ ನಂತರ ಮೃತಪಟ್ಟಿದ್ದಾರೆ ಎಂಬುದನ್ನು ಆರೋಗ್ಯ ಇಲಾಖೆ ತಿಳಿಸಿದೆ. ಎರಡನೆಯ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಟ್ಟಿಲ್ಲ. ಈ ಪ್ರಕರಣದಲ್ಲಿ ನಿಫಾ ಇದೆಯೇ ಎಂದು ಆರೋಗ್ಯ ಇಲಾಖೆಗೇ ಸಂದೇಹ ಇರುವುದು ಇದಕ್ಕೆ ಕಾರಣವಾಗಿದ್ದು ಆಸ್ಪತ್ರೆಯ ಅಧಿಕಾರಿಗಳು ಸಾವಿನಲ್ಲಿ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ನಂತರ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಸರಕಾರದ ಉನ್ನತ ಮಟ್ಟದ ಸಭೆ ನಡೆದಿದ್ದು ಸಚಿವೆ ಮಂಗಳವಾರ ಕೋಝಿಕ್ಕೋಡ್‍ಗೆ ಬರುವರು. ಮೃತರೊಂದಿಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ.