ತನ್ನದು ಉದ್ದೇಶಪೂರ್ವಕ ಹೇಳಿಕೆಗಳಲ್ಲ-ಶರ್ಜಿಲ್ ಇಮಾಂ

0
905

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 30: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯ ವೇಳೆ ತನ್ನ ಭಾಷಣದ ಕುರಿತು ಸ್ಪಷ್ಟನೆ ನೀಡಿದ ಜೆಎನ್‍ಯು ಸಂಶೋಧಕ ವಿದ್ಯಾರ್ಥಿ ಶರ್ಜಿಲ್ ಇಮಾಂ ಉದ್ದೇಶ ಪೂರ್ವಕವಾಗಿ ತಾನೂ ಹಾಗೆ ಹೇಳಿಲ್ಲ. ಆಗಿನ ಮಾನಸಿಕ ಅವಸ್ಥೆಯಲ್ಲಿ ಹಾಗೆ ಹೇಳಿದ್ದೆಂದು ಶರ್ಜಿಲ್ ಇಮಾಂ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊ ದೃಶ್ಯಗಳು ತನ್ನದೆಂದು ಶರ್ಜಿಲ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇದೇವೇಳೆ ಭಾಷಣ ಹೇಳಿಕೆಗಳು ಮನಪೂರ್ವಕವಾದುದು ಎಂದು ದಿಲ್ಲಿ ಪೊಲೀಸ್ ಹೇಳುತ್ತಿದೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಜಾಮಿಯ ಮಿಲ್ಲಿಯ ಇಸ್ಲಾಮಿಯ ಯುನಿವರ್ಸಿಟಿ, ಅಲಿಗಡ ಮುಸ್ಲಿಂ ಯುನಿವರ್ಸಿಟಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕೋಮುವಾದವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಶರ್ಜಿಲ್ ಭಾಷಣ ಮಾಡಿದ್ದರು ಎಂಬ ಆರೋಪದಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ಬಿಹಾರದ ಜೆಹನಾಬದ್‍ಗೆ ಬಂದ ದಿಲ್ಲಿ ಪೊಲೀಸರ ಮುಂದೆ ಶರ್ಜಿಲ್ ಶರಣಾಗಿದ್ದರು. ದಿಲ್ಲಿ ಪಟ್ಯಾಲ ಕೋರ್ಟಿಗೆ ಅವರನ್ನು ಹಾಜರುಪಡಿಸಲಾಗಿದೆ. ಅವರನ್ನು ಐದು ದಿವಸ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ. ಐದು ಲಕ್ಷ ಮಂದಿ ಒಂದಾದರೆ ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಬಹುದು ಎಂಬ ಹೇಳಿಕೆಯನ್ನು ಶರ್ಜಿಲ್ ನೀಡಿದ್ದರು.