ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್, ಸೆ. 18: ಕಳೆದ ವರ್ಷ ನಡೆದ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ರನ್ನು ಸೈನಿಕ ಕೋರ್ಟಿನ ಮೂಲಕ ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಪಾಕಿಸ್ತಾನ ಸರಕಾರ ಹೈಕೋರ್ಟಿಗೆ ತಿಳಿಸಿದೆ.
ಸೋಮವಾರ ಇಸ್ಲಾಮಾಬಾದಿನ ಹೈಕೋರ್ಟು ಜಸ್ಟಿಸ್ ಮಿಯಾಂಗಲ್ ಹಸನ್ ಔರಂಗಝೇಬ್ ಸಹಿತ ಐವರ ಪೀಠಕ್ಕೆ ಅಡಿಷನಲ್ ಅಟಾರ್ನಿ ಜನರಲ್ ಮುನವ್ವರ್ ಇಕ್ಬಾಲ್ ದುಗ್ಗಲ್ ಸರಕಾರದ ನಿಲುವನ್ನು ಹೇಳಿದರು.
ಸೇನಾ ವಿಚಾರಣೆಯ ವಿರುದ್ಧ ಇಮ್ರಾನ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಯುತ್ತಿತ್ತು. ಆಗ ಸರಕಾರದ ನಿಲುವನ್ನು ಅಟಾರ್ನಿ ಜನರಲ್ ತಿಳಿಸಿದ್ದಾರೆ. ಇಮ್ರಾನ್‍ರ ಸೈನಿಕ ವಿಚಾರಣೆಗೆ ರಕ್ಷಣಾ ಸಚಿವಾಲಯ ಈ ವರೆಗೆ ತೀರ್ಮಾನಿಸಿಯೇ ಇಲ್ಲ ಎಂದು ಅವರು ಹೈಕೋರ್ಟಿಗೆ ತಿಳಿಸಿದರು. ರಕ್ಷಣಾ ಸಚಿವಾಲಯ ಹೇಳಿದರೆ ಮಾತ್ರ ಅಂತಹ ಸಾಧ್ಯತೆಯೂ ಇದೆ ಎಂದು ಅಟಾರ್ನಿ ಜನರಲ್ ವಾದಿಸಿದ್ದಾರೆ.
ಇದೇ ವೇಳೆ ಸೈನಿಕ ಕೋರ್ಟು ವಿಚಾರಣೆ ನಡೆಸುತ್ತದೆ ಎಂದು ಸರಕಾರದ ಕಾನೂನು ವ್ಯವಸ್ಥೆಯ ವಕ್ತಾರ ಅಖಿಲ್ ಮಾಲಿಕ್ ಹೇಳಿದ್ದರು. ಇದರ ದಾಖಲೆ ಇದೆ ಎಂದು ಇಮ್ರಾನ್ ಖಾನ್‍ರ ವಕೀಲ ಉಸೈನ್ ಭಂಡಾರಿ ಕೋರ್ಟಿಗೆ ಹೇಳಿದರು. ಇಮ್ರಾನ್ ಖಾನ್ ರನ್ನು ಅದಿಯಾಲ ಜೈಲಿನಲ್ಲಿ ಒಂದು ವರ್ಷಗಳ ಕಾಲ 200ರಷ್ಟು ಕೇಸುಗಳನ್ನು ಹಾಕಿ ಬಂಧಿಸಿಡಲಾಗಿತ್ತು. ಈಗ ಜಾಮೀನಿನಲ್ಲಿ ಅವರು ಹೊರಗಿದ್ದಾರೆ.