ಸನ್ಮಾರ್ಗ ವಾರ್ತೆ
ಲೆಬನಾನ್, ಸೆ.18: ಹಿಝ್ಬುಲ್ಲಾ ಬಳಸುವ 5,000 ಪೇಜರ್‍ಗಳಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿದ ಇಸ್ರೇಲ್‍ನ ಕ್ರೂರ ಘಟನೆಯಿಂದಾಗಿ ಗಾಯಗೊಂಡ ಲೆಬನಾನಿನ ಇರಾನಿ ರಾಯಭಾರಿ ಕಣ್ಣುಗಳನ್ನು ಕಳಕೊಂಡಿದ್ದಾರೆ.
ಮಂಗಳವಾರ ಲೆಬನಾನಿನಲ್ಲಿ ನಡೆದ ವ್ಯಾಪಕ ಪೇಜರ್ ಸ್ಫೋಟದಲ್ಲಿ ಒಟ್ಟು ಮೂರು ಸಾವಿರ ಪೇಜರ್‍ಗಳು ಸ್ಫೋಟಗೊಂಡಿತು. ಗೋಲ್ಡ್ ಅಪೊಲೊ ಎಂಬ ತೈವಾನಿನ ಉಪಕರಣ ಸ್ಫೋಟಗೊಂಡಿದೆ. ಆದರೆ ಇದು ನಾವು ನಿರ್ಮಿಸಿದ ಪೇಜರ್ ಅಲ್ಲ ಎಂದು ತಮ್ಮ ಟ್ರೇಡ್ ಮಾರ್ಕ್ ಬಳಸಲು ಅನುಮತಿ ನೀಡಲಾದ ಯುರೋಪಿನ ಬಿಎಸಿ ಎಂಬ ಕಂಪೆನಿ ನಿರ್ಮಿಸಿದೆ ಎಂದು ತೈವಾನಿನ ಅಪೊಲೊ ಕಂಪೆನಿ ತಿಳಿಸಿದೆ.
ಈ ವರ್ಷ ಆರಂಭದಲ್ಲಿ ಹಿಝ್ಬುಲ್ಲಾ ಪೇಜರ್‍ಗಳನ್ನು ತರಿಸಿಕೊಂಡಿತ್ತು. ಇವೆಲ್ಲವೂ ಹೊಸದಾಗಿ ನಿರ್ಮಿಸಿದ್ದಾಗಿತ್ತು. ಇದನ್ನು ತಯಾರಿಸುವ ಸಮಯದಲ್ಲಿ ಇಸ್ರೇಲಿನ ಗುಪ್ತಚರ ಏಜೆಂಟುಗಳು ಬ್ಯಾಟರಿಯ ಸಮೀಪದಲ್ಲಿ ಸ್ಫೋಟಕ ವಸ್ತು ಇರಿಸಿದ್ದರು. ಮೂರು ಗ್ರಾಂ ಸ್ಫೋಟಕ ವಸ್ತುಗಳನ್ನು ಅಡಗಿಸಿಡಲಾಗಿತ್ತು. ಕೋಡ್ ಸಂದೇಶ ಸಿಕ್ಕಿದೊಡನೆ ಸ್ಫೋಟಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಮೂರು ಸಾವಿರ ಪೇಜರ್‍ಗಳು ಒಂದೇ ಕಾಲದಲ್ಲಿ ಸ್ಫೋಟಗೊಂಡಿದೆ. ಸ್ಫೋಟಗೊಳ್ಳುವ ಮೊದಲು ಹತ್ತು ಸೆಕೆಂಡ್‍ಗಳ ಕಾಲ ಪೇಜರ್‍ಗಳು ಬೀಫ್ ಎಂದು ಸದ್ದು ಮಾಡಿತ್ತು. ಮೆಸೇಜ್ ಎಂದು ಹಲವರು ಭಾವಿಸಿ ಪೇಜರ್ ಅನ್ನು ಮುಖದ ಹತ್ತಿರ ತಂದಾಗ ಸ್ಫೋಟಗೊಂಡಿತ್ತು.