ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ; ನಟನಾಗಿಯೂ ದೇಶ ಸೇವೆ ಮಾಡಬಹುದು-ಸನ್ನಿ ಡಿಯೊಲ್

0
346

ಸನ್ಮಾರ್ಗ ವಾರ್ತೆ

ಪಂಜಾಬ್,ಆ.22: ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಬಾಲಿವುಡ್ ನಟ ಗುರುದಾಸಪುರ ಸಂಸದ ಸನ್ನಿ ಡಿಯೊಲ್ ಹೇಳಿದರು.

ಬಿಜೆಪಿ ಸ್ಪರ್ಧಿಸಲು ಕೋರಿದರೆ ಸ್ಪರ್ಧಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಒಬ್ಬ ನಟನಾಗಿಯೂ ಜನಸೇವೆ ಮಾಡಬಹುದಾಗಿದೆ ಎಂದು ಸನ್ನಿಡಿಯೊಲ್ ಹೇಳಿದರು.
ಉತ್ತಮ ನಟನೆಂಬ ನೆಲೆಯಲ್ಲಿ ಉತ್ತಮ ಪ್ರಾಜೆಕ್ಟ್‌ ಗಳನ್ನು ತರುವುದು ಯುವಕರಿಗೂ ದೇಶಕ್ಕೂ ಮಾಡಬಹುದಾದ ಕೆಲಸ. ಇದಕ್ಕಿಂತ ಹೆಚ್ಚು ಬಯಸಿಲ್ಲ. ಇದುವೇ ನನಗೆ ಇಷ್ಟ ಎಂದು ಅವರು ಹೇಳಿದರು.

ಲೋಕ ಸಭೆಯಲ್ಲಿ ಹಾಜರಿಯಿಲ್ಲ ಎಂಬ ಪ್ರಶ್ನೆಗೆ ಇದು ನನಗೆ ಸಂಬಂಧಿಸಿದಂತೆ ಪ್ರಶ್ನೆಯಲ್ಲ. ಲೋಕಸಭೆಯಲ್ಲಿ ಎಲ್ಲಾ ಪಕ್ಷದ ಪ್ರತಿನಿಧಿಗಳಿರುತ್ತಾರೆ. ಅಲ್ಲಿ ಹೇಗೆ ವರ್ತಿಸುತ್ತಾರೆ ಎಂದು ನೀವು ಕಂಡಿಲ್ವ ಎಂದು ಸಂಸದರ ವರ್ತನೆಯನ್ನು ಸನ್ನಿಡಿಯೊಲ್ ದೂಷಿಸಿದರು.

ಇತರರಿಗೆ ಹಾಗೆ ಮಾಡಬೇಡಿ ಎನ್ನುತ್ತೇವೆ. ಕನಿಷ್ಟಪಕ್ಷ ನಾವು ಹೇಗಿದ್ದೇವೆ ಎಂಬ ಪ್ರಜ್ಞೆ ಬೇಕಲ್ವಾ. ತಾನು ಅವರಂತೆ ಅಲ್ಲ. ಆದುದರಿಂದ ಅದನ್ನು ಆಸ್ವಾದಿಸಲು ನೋಡಲು ಸಾಧ್ಯವಿರುವ ಎಲ್ಲಿಯಾದರೂ ಹೋಗುವುದ ಉತ್ತಮ ಎಂದು ಸನ್ನಿ ಡಿಯೊಲ್ ಹೇಳಿದರು.

ತನ್ನ ತಂದೆಯ ರಾಜಕೀಯದಲ್ಲಿ ಒಂದು ಭರ್ಜರಿ ಇನ್ನಿಂಗ್ಸಿತ್ತು. ನನ್ನ ಕುಟುಂಬಕ್ಕೆ ರಾಜಕೀಯ ಸರಿದೂಗುವುದಿಲ್ಲ ಎಂದವರು ಹೇಳಿದರು.