ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.4: ರಾಜಕೀಯ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್ರನ್ನು ಬಂಧಿಸಿದ್ದರಲ್ಲಿ ಸಂತೋಷವಾಗಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ನಾನು ನಿಮಗೆ ತಿಳಿಸುವುದೇನೆಂದರೆ ಡಿಕೆಶಿ ಬಂಧನದಿಂದ ನನಗೆ ಸಂತೋಷವಾಗಿಲ್ಲ. ಅವರು ಶೀಘ್ರ ಹೊರ ಬರಲಿ ಎಂದು ನಾನು ದೇವರೊಡನೆ ಪ್ರಾರ್ಥಿಸುವೆ ಎಂದು ಯಡಿಯೂರಪ್ಪ ಹೇಳಿದರು. ನನ್ನ ಜೀವನದಲ್ಲಿ ನಾನು ಯಾರನ್ನೂ ದ್ವೇಷಿಸಿಲ್ಲ. ಯಾರಿಗೂ ಮೋಸ ಮಾಡಲು ಬಯಸಿಲ್ಲ. ಕಾನೂನು ತನ್ನದೇ ದಾರಿ ಸ್ವೀಕರಿಸಬೇಕಾಗುತ್ತದೆ. ಶಿವಕುಮಾರ್ ಬಿಡುಗಡೆಯ ಸುದ್ದಿ ಕೇಳದರೆ ಹೆಚ್ಚು ಸಂತೋಷ ಪಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಕಪ್ಪುಹಣ ಬಿಳಿ ಮಾಡಿದ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಿವಕುಮಾರ್ರನ್ನು ಇಡಿ ಮಂಗಳವಾರ ಸಂಜೆ ಬಂಧಿಸಿದೆ. ಇದು ರಾಜಕೀಯ ದ್ವೇಷ ತೀರಿಸುವ ಕೃತ್ಯವೆಂದು ಪ್ರತಿಪಕ್ಷಗಳು ಟೀಕಿಸಿವೆ. ಅರ್ಥವ್ಯವಸ್ಥೆ ಮತ್ತು ರೂಪಾಯಿ ಮೌಲ್ಯವೂ ಕುಸಿತಗೊಂಡಿದೆ. ಈ ಸಂದರ್ಭದಲ್ಲಿ ವಸ್ತುಸ್ಥಿತಿಯನ್ನು ಮರೆಸಿಡಲು ಕೇಂದ್ರ ಸರಕಾರ ಇಂತಹ ಕೃತ್ಯಗಳನ್ನು ಮಾಡುತ್ತಾ ಹೋಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲ ಹೇಳಿದರು.












