ಬಾಲಿವುಡ್‍ನಲ್ಲಿ ಸ್ವಜನ ಪಕ್ಷಪಾತಕ್ಕಿಂತ ಹೆಚ್ಚು ಜನಾಂಗೀಯತೆ ಇದೆ- ನವಾಝುದ್ದೀನ್ ಸಿದ್ದಿಕಿ

0
1792

ಸನ್ಮಾರ್ಗ ವಾರ್ತೆ

ಮುಂಬೈ: ಬಾಲಿವುಡ್‍ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚು ಜನಾಂಗೀಯವಾದ ಮೇಳೈಸುತ್ತಿದೆ ಎಂದು ನಟ ನವಾಝುದ್ದೀನ್ ಸಿದ್ದಿಕಿ ಹೇಳಿದ್ದಾರೆ.

ಸೀರಿಯಸ್ ಮೆನ್ ಚಿತ್ರದ ಸಹನಟಿ ಇಂದಿರಾ ತಿವಾರಿಯ ಕುರಿತು ಮಾತಾಡುತ್ತಿದ್ದ ಅವರು ತಿವಾರಿಗೆ ಉತ್ತಮ ಪಾತ್ರ ಮುಂದೆ ಸಿಗಬಹುದು ಎಂದರು. ಸೀರಿಯಸ್ ಮೆನ್‍ನ ನಟನೆಗೆ ಸಿದ್ದಿಕಿಗೆ ಎಮ್ಮಿ ಪ್ರಶಸ್ತಿಗೆ ನಾಮಕರಣ ಮಾಡಲಾಗಿತ್ತು.

ಸಿನೆಮಾದಲ್ಲಿ ಬಹಳ ಹೆಚ್ಚು ಜನಾಂಗೀಯವಾದ ತುಂಬಿಕೊಂಡಿದೆ. ಸ್ವಜನ ಪಕ್ಷಪಾತಕ್ಕಿಂತಲೂ ಇದು ಹೆಚ್ಚಾಗಿದೆ. ಇದರ ವಿರುದ್ಧ ಹಲವು ವರ್ಷಗಳಿಂದ ಹೋರಾಡುತ್ತಿದ್ದೇನೆ. ಕಪ್ಪು ಬಣ್ಣದವರು ಇನ್ನು ಮುಂದೆ ನಾಯಕಿಯರಾಗಬಹುದೆಂದು ನಿರೀಕ್ಷಿಸುತ್ತೇನೆ. ಹಲವು ವರ್ಷ ನನ್ನನ್ನು ಮೂಲೆಗೆ ಇಡಲಾಗಿತ್ತು. ಆದರೆ, ಈಗ ನನ್ನ ದಾರಿಯನ್ನು ನಾನು ಹುಡುಕಿಕೊಂಡೆ. ಈಗ ದೂರಲು ನನಗೆ ಸಾಧ್ಯವೂ ಇಲ್ಲ. ಆದರೆ ಉತ್ತಮ ನಟರು ಈಗಲೂ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ನವಾಝುದ್ದೀನ್ ಸಿದ್ದಿಕಿ ಹೇಳಿದರು.