ಲಖೀಂಪುರ ರೈತರ ಮಾರಣಹೋಮ: ನಾಳೆ ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ರಾಹುಲ್ ಗಾಂಧಿ

0
305

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರ ಪ್ರದೇಶ ಲಖೀಂಪುರ್ ಖೇರಿ ರೈತರ ಮಾರಣಹೋಮಕ್ಕೆ ಸಂಬಂಧಿಸಿ ನಾಳೆ ರಾಹುಲ್ ಗಾಂಧಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ರನ್ನು ಭೇಟಿಯಾಗಲಿದ್ದಾರೆ. ಬುಧವಾರ ಬೆಳಗ್ಗೆ 11:30ಕ್ಕೆ ಅವರಿಗೆ ಅನುಮತಿ ಸಿಕ್ಕಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಲಖೀಂಪುರ ಖೇರಿಯಲ್ಲಿ ಕೊಲೆಯಾದ ರೈತರ ಮರಣಾನಂತರ ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿ ಭಾಗಿಯಾಗಲಿದ್ದಾರೆ. ಇದೇವೇಳೇ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಿಗೆ ವೇದಿಕೆ ಕೊಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ತಿಳಿಸಿದರು.

ಅಕ್ಟೋಬರ್ ಮೂರರಂದು ದೇಶವನ್ನೇ ಕಂಪಿಸಿದ ರೈತ ಕೊಲೆ ನಡೆದಿದ್ದು ಕೇಂದ್ರ ಗೃಹ ಸಹ ಸಚಿವ ಅಜಯ್ ಮಿಶ್ರರ ಪುತ್ರ ಆಶೀಷ್ ಮಿಶ್ರ ಚಲಾಯಿಸುತ್ತಿದ್ದ ಕಾರು ರೈತರ ನಡುವೆ ನುಗ್ಗಿ ನಾಲ್ವರು ರೈತರ ಸಹಿತ ಎಂಟು ಮಂದಿ ಪ್ರಾಣ ಕಳಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಆಶಿಷ್ ಮಿಶ್ರನನ್ನು ಪೊಲೀಸರು ಬಂಧಿಸಿದ್ದು ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಮಗನ ಬಂಧನವಾಗಿದ್ದು ಸಚಿವ ಅಜಯ್ ಮಿಶ್ರ ರಾಜೀನಾಮೆ ನೀಡಬೇಕೆಂದು ರೈತರು ಮತ್ತು ಪ್ರತಿಪಕ್ಷ ಆಗ್ರಹಿಸುತ್ತಿದೆ.