ಎನ್‍ಪಿಆರ್ ಗೆ ಬೆಂಬಲ ಇಲ್ಲ: ಬಿಹಾರ ಮುಖ್ಯಮಂತ್ರಿ

0
2730

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಎನ್‍ಪಿಆರ್ ಗೆ ಬೆಂಬಲ ನೀಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು. ಇದಕ್ಕೆ ಸಂಬಂಧಿಸಿದ ಅಭಿಪ್ರಾಯ ಸರಿಯಾಗುವವರೆಗೆ ಎನ್‍ಪಿಆರ್ ಗೂ ಸಹಕರಿಸುವುದಿಲ್ಲ. ಎನ್‍ಪಿಆರ್, ಎನ್‍ಆರ್ ಸಿಯ ಮೊದಲ ಹೆಜ್ಜೆಯಾಗಿದೆ ಎನ್ನಲಾಗುತ್ತಿದೆ ಎಂದರು. ಆರ್‍ಜೆಡಿ, ಆರ್‍ಎಲ್‍ಎಸ್‍ಪಿ, ಎಚ್‍ಐಎಂ ಮುಂತಾದ ಬಿಹಾರ ಪ್ರತಿಪಕ್ಷ ಪಾರ್ಟಿಗಳು ಕೂಡ ಎನ್ ಪಿಆರ್ ಅನ್ನು ವಿರೋಧಿಸುತ್ತಿದೆ. ಎನ್ ಪಿ ಆರ್, ಎನ್ ಆರ್ ಸಿಗೆ ಸಂಬಂಧ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಆದರೆ ಎನ್ ಪಿ ಆರ್ ಎನ್ ಆರ್ ಸಿಯೆಡೆಗಿನ ಮೊದಲ ಹೆಜ್ಜೆಯೆಂದು ಗೃಹ ಸಹಾಯಕ ಸಚಿವ ಕಿರಣ್ ರಜುಜು ಹೇಳಿದ್ದಾರೆ. ಆದ್ದರಿಂದ ಇದರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಜೆಡಿಯು ವಕ್ತಾರ ತ್ಯಾಗಿ ಹೇಳಿದರು.

ಕಾಂಗ್ರೆಸ್ ಕಾಲದಲ್ಲಿ ಎನ್‍ಪಿಆರ್ ಇತ್ತು. ಆದರೆ, ಅದರಿಂದ ಬೇರೆಯ ರೀತಿಯಲ್ಲಿ ಎನ್‍ಪಿಆರ್ ಈಗ ತರಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಎನ್‍ಪಿಆರ್ ಗೆ ಸದ್ಯ ಸಹಕರಿಸುವುದಿಲ್ಲ ಎಂದು ತ್ಯಾಗಿ ಹೇಳಿದರು.