ಉ.ಪ್ರ ಹಿಂಸಾಚಾರ; ಪೊಲೀಸಧಿಕಾರಿಯನ್ನು ರಕ್ಷಿಸಿದ ಹಾಜಿ ಖಾದಿರ್ – ವೀಡಿಯೊ

0
1090

ಫಿರೋಜಾಬಾದ್: ಉತ್ತರ ಪ್ರದೇಶದಲ್ಲಿ ಹೊಸ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿದ್ದು, ಇದೀಗ ಅದೇ ಪ್ರತಿಭಟನೆಯ ಮಧ್ಯೆ ಮಾನವೀಯತೆ ಸಂದೇಶವೊಂದು ಹೊರ ಬಂದಿದೆ. ಹಾಜಿ ಖಾದರ್ ಸಾಬ್ ಎನ್ನುವವರು ಉದ್ರಿಕ್ತ ಪ್ರತಿಭಟನಾಕಾರರಿಂದ ಪೊಲೀಸರನ್ನು ರಕ್ಷಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಅಜಯ್ ಕುಮಾರ್ ಎನ್ನುವ ಪೊಲೀಸನ್ನು ಹಾಜಿ ಖಾದಿರ್ ತನ್ನ ಮನೆಗೆ ಕರೆದುಕೊಂಡು ಹೋಗಿ ಬಳಿಕ ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ತಲುಪಿಸಿದರು.

ಹಾಜಿ ಖಾದರ್ ಸಾಹಬ್ ನನ್ನನ್ನು ದೇವದೂತನಂತೆ ಬಂದು ರಕ್ಷಿಸಿದರು. ಇಲ್ಲದಿದ್ದರೆ ನಾನು ಸಾಯುತ್ತಿದೆ. ಅವರು ಮನೆಗೆ ಕರೆದುಕೊಂಡು ಹೋಗಿ ನೀರು ಬಟ್ಟೆಗಳನ್ನು ನೀಡಿ ಉಪಚರಿಸಿದರು ಎಂದು ಅಜಯ್ ಕುಮಾರ್ ಹೇಳುತ್ತಾರೆ. ಈ ಸಂದರ್ಭದಲ್ಲಿ ನಾನು ನಮಾಜ್ ಮಾಡುತ್ತಿದ್ದೆ. ಜನ ಸಮೂಹ ಪೊಲೀಸ್ ಒಬ್ಬರನ್ನು ಸುತ್ತುವರಿದಿದೆ ಎಂದು ತಿಳಿದಾಕ್ಷಣ ನಾನು ಹೋಗಿ ಅವರನ್ನು ರಕ್ಷಿಸಿದೆ. ಹೀಗೆ ರಕ್ಷಿಸುವಾಗ ನನಗೆ ಅವರ ಹೆಸರು ಧರ್ಮ ಗೊತ್ತಿರಲಿಲ್ಲ. ಮಾನವೀಯತೆಗಾಗಿ ಮಾತ್ರ ನಾನು ಈ ಕೆಲಸ ಮಾಡಿದ್ದೇನೆ ಎಂದು ಹಾಜಿ ಖಾದಿರ್ ಹೇಳಿದರು. ಅಜಯ್ ಕುಮಾರ್ ರ ಕೈ ಮತ್ತು ತಲೆಗೆ ಗಾಯಗಳಾಗಿವೆ.

ಉತ್ತರ ಪ್ರದೇಶದಲ್ಲಿ  ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 18 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸರಕಾರ ಸ್ಥಗಿತಗೊಳಿಸಿದೆ.