ಕೋವಿಡ್ ನಿಂದ ಸಾಯುತ್ತಿರುವವರ ನೈಜ ಅಂಕಿ ಅಂಶವನ್ನು ಸರಕಾರ ಮರೆಮಾಚುತ್ತಿದೆ: ಅಸಾದುದ್ದೀನ್ ಉವೈಸಿ

0
457

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೋವಿಡ್ ನಿಂದ ಸಾಯುತ್ತಿರುವವರ ನೈಜ ಅಂಕಿ ಅಂಶವನ್ನು ಸರಕಾರ ಮರೆಮಾಚುತ್ತಿದೆ ತೋರಿಸುತ್ತಿದೆ ಎಂದು ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ. ಸರಕಾರ ಹೊರಬಿಡುವ ಲೆಕ್ಕಗಳು ವಾಸ್ತವ ಸ್ಥಿತಿಗೆ ಹೊಂದಿಕೆಯಾಗುವುದಿಲ್ಲವೆಂದು ಅವರು ಆರೋಪಿಸಿದ್ದಾರೆ.

ಸರಕಾರ ಹೊರಬಿಟ್ಟ ಲೆಕ್ಕಗಳು ವಾಸ್ತವಿಕ ಅಂಕಿ ಅಂಶಗಳಿಗೆ ಹೊಂದುವುದಿಲ್ಲ. ತಮ್ಮ ಜನರನ್ನು ಕಳಕೊಂಡ ಕುಟುಂಬ ಸದಸ್ಯರಿಗೆ ಇವರ ಲೆಕ್ಕಗಳೊಳಗೆ ಸೇರುವ ಅರ್ಹತೆಯಿದೆ ಎಂದು ಉವೈಸಿ ಹೇಳಿದ್ದಾರೆ. ಹಲವು ವರದಿಗಳಲ್ಲಿ ಸರಕಾರ ಪ್ರಕಟಿಸಿದ ಮರಣ ಸಂಖ್ಯೆಗಿಂತ ಹೆಚ್ಚಿನ ಸಾವುಗಳು ಆಗಿವೆ. ಆದರೆ ಸರಕಾರ ಇದು ಸರಿಯಾದ ವರದಿಯಲ್ಲ ಎನ್ನುತ್ತಿದೆ. ಸರಕಾರದ ಕೈಯಲ್ಲಿ ಸರಿಯಾದ ದಾಖಲೆಗಳಿಲ್ಲ. ಕೊರೊನ ಸಾವಿನ ಸಂಖ್ಯೆಯನ್ನು ಸ್ಪಷ್ಟವಾಗಿ ದಾಖಲಾಗಿಸಲಾಗುತ್ತಿಲ್ಲ ಎಂದು ಉವೈಸಿ ಆರೋಪಿಸಿದ್ದಾರೆ.

ಇದೇ ವೇಳೆ, ದೇಶದ ಕೊರೋನ ಪೀಡಿತರ ಸಂಖ್ಯೆ ಕಡಿಮೆಯಾಗಿದೆ. 24 ಗಂಟೆಗಳಲ್ಲಿ ದೇಶದಲ್ಲಿ 80,834 ಮಂದಿಗೆ ಕೊರೊನ ಬಂದಿದೆ. ಇದರೊಂದಿಗೆ ಒಟ್ಟು ಕೊರೊನ ಪೀಡಿತರ ಸಂಖ್ಯೆ 2,94,39,989ಕ್ಕೇರಿಕೆಯಾಗಿದೆ.