ಸನ್ಮಾರ್ಗ ವಾರ್ತೆ
✍️ ಅಬ್ದುಸ್ಸಲಾಮ್ ವಾಣಿಯಂಬಲಮ್
ಸ್ವಾತಂತ್ರ್ಯ ದೊರೆಯುವುದಕ್ಕಿಂತ ಸ್ವಲ್ಪ ಮೊದಲು ಮೌಲಾನಾ ಮೌದೂದಿಯವರು ಮದ್ರಾಸ್‌ನಲ್ಲಿ ನಡೆದ ಭಾಷಣದಲ್ಲಿ ನಿರ್ದೇಶಿಸಿದ ನಾಲ್ಕು ಕಾರ್ಯಕ್ರಮಗಳು ಎಷ್ಟು ಪ್ರಸ್ತುತ ಎಂಬ ಪ್ರಶ್ನೆಗೆ ನಜಅತುಲ್ಲಾ ಸಿದ್ದೀಕಿಯವರು ನೀಡಿದ ಉತ್ತರ ಹೀಗಿದೆ:
“ಇಂದು ಇದನ್ನು ನಾವು ಯಾವ ಕಾರಣಕ್ಕೂ ಮಾರ್ಗದರ್ಶನವಾಗಿ ಸ್ವೀಕರಿಸಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ಆ ಕರ್ಮರಂಗದ ಚಟುವಟಿಕೆಗಾಗಿ ನಾನು ಹಲವು ಸಾಹಿತ್ಯಗಳನ್ನು ಪ್ರಕಟಿಸಿರುವುದು ಸರಿ. ಆದರೆ ಅದರಿಂದ ಮುಸ್ಲಿಮೇತರರಿಗೆ ಪ್ರಯೋಜನವಾಗುವುದು ತೀರಾ ವಿರಳ. ಈ ಒಂದು ಕಾರ್ಯಕ್ರಮ ಚಟುವಟಿಕೆಯಿಂದಾಗಿ ನಾವು ರಾಜಕೀಯದಿಂದ ದೂರ ಸರಿದೆವು. ಅದರಿಂದ ನಮ್ಮ ಪ್ರಭಾವವು ಒಂದು ಹಂತಕ್ಕೆ ಮಾತ್ರ ಸೀಮಿತವಾಯಿತು. ರಾಜಕೀಯದಿಂದ ದೂರ ನಿಂತ ಪರಿಣಾಮ ಈ ದೇಶದ ಜನಸಾಮಾನ್ಯರ ಅಗತ್ಯ, ಸಮಸ್ಯೆಗಳ ಪರಿಹಾರಕ್ಕಿರುವ ವಕ್ತಾರರಾಗಿ ಅವರು ನಮ್ಮನ್ನು ಪರಿಗಣಿಸಲಿಲ್ಲ. ಕೇವಲ ಮುಸ್ಲಿಮರ ಸಮಸ್ಯೆಗಳ ಪರಿಹಾರಗಳ ಮೇಲೆ ಅದು ಪ್ರಭಾವ ಬೀರಿತು. ಆರಂಭದಲ್ಲಿ ಈ ಚಟುವಟಿಕೆಯ ಅಗತ್ಯವಿತ್ತು. ನಂತರ ಬಹಳ ವೇಗದಲ್ಲಿ ಅದಕ್ಕಿಂತ ಮುನ್ನಡೆದು ಹೋಗಬೇಕಾಗಿತ್ತು. ಇನ್ನು ಮುಂದೆ ಯಾದರೂ ಜಮಾಅತೆ ಇಸ್ಲಾಮಿಯನ್ನು ರಾಜಕೀಯದಿಂದ ದೂರ ನಿಲ್ಲಲು ಉಪದೇಶ ಮಾಡಬಾರದೆಂದು ನಾನು ಹೇಳುತ್ತೇನೆ.”
“ಈ ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಎದುರಿಸಲು ಒಂದು ವಿಭಾಗವಿದೆಯೆಂದು ನಾವು ಅವರ ಜೊತೆ ನಿಲ್ಲದಿದ್ದರೆ ಅದು ದೇಶಕ್ಕೆ ಅಪಾಯಕಾರಿಯಾಗಿದೆ ಎಂಬುದನ್ನು ಮೂವತ್ತು ವರ್ಷಗಳ ಹಿಂದೆಯೇ ನಾವು ಅರಿತುಕೊಂಡಿದ್ದೆವು. ಭಾರತದ ಜಾತ್ಯತೀತತೆಯ ಕುರಿತು ನಮ್ಮ ಚರ್ಚೆ ಮತ್ತು ಒಲವು ಇದರಲ್ಲಿ ಉಂಟಾದ ಬದಲಾವಣೆ ಈ ತಳಹದಿಯಲ್ಲಿ ರೂಪೀಕೃತಗೊಂಡದ್ದಾಗಿದೆ. ಈ ದೇಶದಲ್ಲಿ ಎರಡು ವಿಭಾಗದ ಜನರಿದ್ದಾರೆ. ಇದರಲ್ಲಿ ಒಂದು ವಿಭಾಗವು ಹಿಂದುತ್ವ ಭಾರತದ ಚಿಂತನೆಯನ್ನು ಬೆಳೆಸುವವರಾಗಿದ್ದಾರೆ. ಅವರು ಮೇಲುಗೈ ಸಾಧಿಸಿದರೆ ನಿಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಅದಕ್ಕಾಗಿ ಈ ದೇಶದಲ್ಲಿ ಎಲ್ಲಾ ಜನರಿಗೆ ಸಮಾನ ಸ್ಥಾನಮಾನ ಸಿಗಲು ಬಯಸುವ ಎರಡನೇ ವಿಭಾಗದ ಜೊತೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಮೌಲಾನಾ ಮೌದೂದಿಯವರು ಇದ್ದಾಗ ಇಂತಹ ಒಂದು ಸಮಸ್ಯೆಯನ್ನು ಎದುರಿಸಿರಲಿಲ್ಲ.”
ಸಂಘಟನೆಯ ಬಗ್ಗೆ ಯಾವತ್ತೂ ನಮ್ಮಲ್ಲಿ ಒಂದು ಗುರಿ, ದೂರದೃಷ್ಟಿಯಿರಬೇಕು. ನಾವು ಕಾರ್ಯ ಚಟುವಟಿಕೆ ಆರಂಭಿಸಿದಾಗ ನಮ್ಮೊಂದಿಗೆ ಸಾಕಷ್ಟು ಜನರು ಸೇರುವರು ಎಂಬ ದಿಸೆಯಲ್ಲಿ ನಾವು ಕಾರ್ಯರಂಗಕ್ಕಿಳಿಯಬೇಕು.
ಕಾರ್ಯರಂಗದಲ್ಲಿ ಸಕ್ರಿಯವಾಗಿರುವಾಗ ನಾವು ಸವಾಲುಗಳನ್ನು ಹೇಗೆ ಎದುರಿಸಬೇಕು, ಅದರ ಬಗ್ಗೆ ಇತರರು ಏನು ಭಾವಿಸುತ್ತಾರೆ, ಎಂಬುದು ನಮ್ಮ ಯಶಸ್ಸಿನಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಕಾರ್ಯರಂಗಕ್ಕಿಳಿದರೆ ನಾವು ಎಷ್ಟು ಸಕ್ರಿಯರಾಗಿರುತ್ತೇವೆಯೋ ಅಷ್ಟೇ ಹೊಸ ಜನರು ನಮಗೆ ಲಭಿಸುತ್ತಾರೆ.
ಪುಸ್ತಕದಲ್ಲಿ ಬರೆದಿಟ್ಟ ವಿಚಾರಗಳ ಬಗ್ಗೆ ಮಾತ್ರ ನಾವು ಗಮನಹರಿಸಬೇಕು ಎಂಬುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ಜನರಿಗೆ ಅದರಲ್ಲಿ ಜಿಗುಪ್ಸೆಯಾಗಿ ಹೋಗಿದೆ. ಹೊಸ ಪೀಳಿಗೆಯ ಜನರಿಗೆ ಅಂತಹದ್ದರಲ್ಲಿ ಆಸಕ್ತಿಯೇ ಇಲ್ಲ. ಒಂದು ಹೊಸ ದಿಕ್ಕಿನತ್ತ ಸಾಗುವ ಬಗ್ಗೆ ಹೆಚ್ಚು ಒತ್ತು ಕೊಡಬೇಕೆಂದು ನಾವು ಹೇಳಿದೆವು. ಜನರು ಅದರ ವಿರುದ್ಧ ಸವಾಲುಗಳೆನ್ನೆಸೆದಾಗ ನಾವು ನಮ್ಮ ಚಟುವಟಿಕೆಗಳ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದೆವು. ಆಕರ್ಷಿತರಾದ ಜನರು ನಮ್ಮೊಂದಿಗೆ ಸೇರಿದರು.
ಆ ಕಾಲ ಗತಿಸಿದಂತೆ ಹೊಸ ಜನರು ಬರತೊಡಗಿದರು. ಹೊಸ ಹೊಸ ಪ್ರಶ್ನೆಗಳನ್ನು ಕೇಳತೊಡಗಿದರು. ಅದನ್ನು ಹಳೆಯ ಉತ್ತರದ ಮೂಲಕ ಎದುರಿಸಲಾಗದು. ಅದಕ್ಕಾಗಿ ಹೊಸ ದಾರಿಯನ್ನು ನಾವು ಹುಡುಕಲೇಬೇಕು. ಅದಕ್ಕೆ ಹೊಸ ಉತ್ಸಾಹದೊಂದಿಗೆ ಸಿದ್ಧವಾದರೆ ಮಾತ್ರ ಹೊಸ ಜನರು ಹೊಸ ವೈಭವ ಲಭಿಸುವುದು. ಆ ಹೊಸ ದಿಕ್ಕು ಹೊಸ ದಿಸೆ ಯಾವುದು ಎಂಬ ಬಗ್ಗೆ ನನ್ನಲ್ಲಿ ಸ್ಪಷ್ಟತೆಯಿಲ್ಲ. ಎಲ್ಲಾ ಜನರ ಸಮಸ್ಯೆಗಳನ್ನು ನಾವು ಅಭಿಮುಖೀಕರಿಸಬೇಕು ಎಂದು ಮಾತ್ರ ಹೇಳ ಬಲ್ಲೆ.
ಮುಸ್ಲಿಮರ ಹಿತಕ್ಕಾಗಿ ಅಭ್ಯುದಯಕ್ಕಾಗಿ ನಾವು ಕೈಗೊಳ್ಳುವ ಯಾವುದೇ ಕಾರ್ಯಕ್ರಮಗಳು ಇತರರಲ್ಲಿ ಸಂಶಯ ಮೂಡಿಸುವ ರೀತಿಯಲ್ಲಾಗಲೀ ಅವರಿಗೆ ತೊಂದರೆಯುಂಟು ಮಾಡುವಂತಹದ್ದಾಗಲೀ ಆಗಬಾರದು. ವಿಶೇಷವಾಗಿ ಒಂದು ಜನ ವಿಭಾಗದ ಆಡಳಿತ ಮತ್ತೊಂದು ಜನ ವಿಭಾಗದ ಮೇಲೆ ಆಧಿಪತ್ಯ ಸಾಧಿಸುವುದು ಮುಂತಾದ ಯಾವುದೇ ವಿಚಾರಗಳನ್ನೂ ಪ್ರಸ್ತಾಪಿಸಲೇಬಾರದು. ಎಲ್ಲಾ ಜನರನ್ನು ಅಳೆಯುವ ಮಾನದಂಡ ಒಂದೇ ಆಗಬೇಕು. ನಾವು ಎಲ್ಲರನ್ನೂ ಸೇರಿಸಿಕೊಂಡು ಮುಂದೆ ಹೋಗಲು ಪ್ರಾಪ್ತರಾದವರು ಎಂಬ ಪ್ರಜ್ಞೆ ಜನರಲ್ಲಿ ಮೂಡುವಂತಾಗಲು ನಮ್ಮಿಂದ ಸಾಧ್ಯವಾಗಬೇಕು.”