ಗಲ್ಫ್ ನಲ್ಲಿ ಸಿಲುಕಿದವರಿಗೆ ಒಮನ್ ಏರ್ ವೇಸ್ ನಿಂದ ವಿಶೇಷ ವಿಮಾನ

0
1371

ಸನ್ಮಾರ್ಗ ವಾರ್ತೆ

ಮಸ್ಕತ್, ಮಾ. 21: ಗಲ್ಫ್ ನಲ್ಲಿ ಸಿಕ್ಕಿಬಿದ್ದವರನ್ನು ಕೇರಳಕ್ಕೆ ಕರೆತರಲು ಒಮನ್ ಏರ್ ವಿಶೇಷ ವಿಮಾನ ಸರ್ವಿಸ್ ಮಾಡುತ್ತಿದೆ. ಮಸ್ಕತ್‍ನಿಂದ ರವಿವಾರ ಬೆಳಗ್ಗೆ 2:15ಕ್ಕೆ ಪ್ರಯಾನ ಆರಂಭವಾಗಲಿದೆ. ಬೆಳಗ್ಗೆ 7: 10ಕ್ಕೆ ಕೇರಳದ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಅಬುಧಾಬಿ, ದುಬೈ, ಬಹ್ರೈನ್, ದೋಹ, ಲಂಡನ್ ಮೊದಲಾದ ನಗರದಲ್ಲಿ ಇರುವವರಿಗೆ ಈ ವಿಮಾನಕ್ಕೆ ಸಂಪರ್ಕ ನೀಡಲಾಗುವುದು. ಪ್ರಯಾಣ ನಿಷೇಧ ರದ್ದಾದ ಬಳಿಕವೇ ಒಮನ್‍ನಿಂದ ವಿಮಾನ ಸರ್ವಿಸ್ ಇನ್ನು ಮುಂದೆ ಇರಲಿದೆ.

7:10ಕ್ಕೆ ಕರಿಪ್ಪೂರ್ ಗೆ ಬರುವ ವಿಮಾನ 8:10ಕ್ಕೆ ಮರಳಲಿದೆ. ಹೋಗುವಾಗ ಅದರಲ್ಲಿ ಒಮನ್ ಪ್ರಜೆಗಳನ್ನು ಮಾತ್ರ ಕರೆದುಕೊಂಡು ಹೋಗಲಾಗುವುದು.