ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಮಾ. 21: ಅಮೆರಿಕ ಅರ್ಥ ವ್ಯವಸ್ಥೆ ತಾರು ಮಾರಾಗಿದ್ದು ಶೇರು ಪೇಟೆಯಲ್ಲಿ ದೊಡ್ಡ ಮಟ್ಟದ ಕುಸಿತ ವ್ಯಕ್ತವಾಗಿದೆ. ಡೌಜೋನ್ಸ್ ಇಂಡಸ್ಟ್ರಿಯಲ್ ಅವರೇಜಿನಲ್ಲಿ 900 ಅಂಕ ನಷ್ಟ ದಾಖಲಾಗಿದೆ. ಶೇ. 17.3 ನಷ್ಟದೊಂದಿಗೆ ಡೌಜೋನ್ಸ್ ಈ ವಾರ ವ್ಯಾಪಾರ ಕೊನೆಗೊಂಡಿದೆ. ಕಳೆದ ನಾಲ್ಕುವಾರಗಳಲ್ಲಿ ಸೂಚ್ಯಂಕ ನಷ್ಟದಲ್ಲಾಗಿತ್ತು.
ಅಮೆರಿಕ ಶೇರು ಮಾರುಕಟ್ಟೆಯಲ್ಲಾದ ಮಾರಾಟ ಒತ್ತಡ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯೆಡೆಗೆ ಮಾರುಕಟ್ಟೆಯನ್ನು ತಲುಪಿಸಿದೆ. ಅಮೆರಿಕದ ಅರ್ಥ ವ್ಯವಸ್ಥೆ ಮಾಂದ್ಯಕ್ಕೆ ಸರಿಯುತ್ತಿರುವ ಸುದ್ದಿಗಳಿಂದಾಗಿ ಹೂಡಿಕೆದಾರರು ಮಾರುಕಟ್ಟೆಯ ಮೇಲೆ ಗಂಭೀರ ಆಸಕ್ತಿ ಬೆಳೆಸಿದಂತಿಲ್ಲ.
ವಿವಿಧ ಆರ್ಥಿಕತೆಗಳು ಲಾಆಫ್ ಆಗಿ ಬಿಕ್ಕಟ್ಟು ಎದುರಿಸುತ್ತಿವೆ. ಅಮೆರಿಕದ ಹಲವು ರಾಜ್ಯಗಳು ಮನೆಯಲ್ಲಿ ಕೂತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದ್ದು ಕೂಡ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಸೂಚನೆಗಳಿಂದ ಅಮೆರಿಕದ ತೈಲ ಬಳಕೆ ಕೂಡ ಕಡಿಮೆಯಾಗುತ್ತಿದೆ. ತೈಲ ಬಳಕೆಯಲ್ಲಿ ಶೇ. 21ರಷ್ಟು ಕುಸಿದಿದೆ. ತೈಲದರ ಬ್ಯಾರಲ್ಗೆ 20 ಡಾಲರ್ ಗೆ ತಲುಪಿತ್ತು. 2002ರ ಬಳಿಕ ಇದೇ ಮೊದಲ ಬಾರಿ ತೈಲದರದಲ್ಲಿ ಇಷ್ಟು ಅಧಿಕ ಮೊತ್ತದ ಇಳಿಕೆ ಸಂಭವಿಸಿದೆ.












