ಒಮಾನ್ ಸಂದರ್ಶನ ವೀಸಾ ಅವಧಿ ಮುಗಿದವರಿಗೆ ಜೂ.15ರವರೆಗೆ ವಿಸ್ತರಣೆ

0
616

ಸನ್ಮಾರ್ಗ ವಾರ್ತೆ

ಮಸ್ಕತ್,ಜೂ.9: ಕೊರೋನದಿಂದ ಒಮನ್‍ನಲ್ಲಿ ಸಿಕ್ಕಿಹಾಕಿಕೊಂಡ ವಿದೇಶಿಯರ ವಿಸಿಟಿಂಗ್, ಎಕ್ಸ್‍ಪ್ರೆಸ್ ವೀಸಾ ಕಾಲವಧಿ ಈ ತಿಂಗಳು 15ರವರೆಗೆ ವಿಸ್ತರಿಸಲಾಗಿದೆ ಎಂದು ರಾಯಲ್ ಓಮನ್ ಪೊಲೀಸ್ ತಿಳಿಸಿದೆ.

ವಿಮಾನ ನಿಲ್ದಾಣ ಮುಚ್ಚಿದ್ದರಿಂದ ಸ್ವಂತ ಊರಿಗೆ ಹೋಗಲು ಆಗದವರಿಗೆ ಈ ಸೌಲಭ್ಯ ಲಭಿಸಲಿದೆ. ಸಂದರ್ಶನ ವೀಸಾ ನವೀಕರಣಕ್ಕೆ ಏನೂ ಮಾಡಬೇಕಾಗಿಲ್ಲ. ಇದು ಜೂ.15ರವರೆಗೆ ನವೀಕರಣಗೊಂಡು ಸಿಗಲಿದೆ ಎಂದು ಆರ್‍ಒಪಿ ಉನ್ನತ ಅಧಿಕಾರಿಯನ್ನು ಉದ್ಧರಿಸಿ ಅಧಿಕೃತ ದಿನಪತ್ರಿಕೆ ಒಮಾನ್ ಒಬ್ಸರ್ವರ್ ವರದಿ ಮಾಡಿದೆ.

ಲಾಕ್‍ಡೌನ್‍ನಿಂದ ವಿದೇಶದಲ್ಲಿ ಸಿಕ್ಕಿಬಿದ್ದ ಒಮನ್ ರೆಸಿಡೆಂಟ್ಸ್ ವೀಸ ಇರುವವರಿಗೆ ಅದರ ಕಾಲವಧಿ ಮುಗಿದರೆ ಆನ್‍ಲೈನ್ ಮೂಲಕ ನವೀಕರಿಸಿಕೊಳ್ಳಬಹುದಾಗಿದೆ. ಒಮಾನ್ ಒಳಗೆ ಇರುವವರಿಗೂ ರೆಸಿಡೆಂಟ್ಸ್ ವೀಸಾ ಆನ್‍ಲೈನ್‍ನಲ್ಲಿ ನವೀಕರಿಸುವ ಸೌಲಭ್ಯ ಒದಗಿಸಿಕೊಡಲಾಗಿದೆ. ಸಂದರ್ಶಕ ವೀಸಾ ಸಿಕ್ಕಿಯೂ ವಿಮಾನ ನಿಲ್ದಾಣ ಮುಚ್ಚುವ ಮೊದಲು ದೇಶದಲ್ಲಿ ಇಳಿಯಲು ಸಾಧ್ಯವಾಗದಿದ್ದವರಿಗೆ ಹಳೆಯ ವೀಸಾದ ಬದಲಿಗೆ ಹೊಸ ಅರ್ಜಿ ಗುಜರಾಯಿಸಿಕೊಳ್ಳಬಹುದಾಗಿದೆ.

ಬಹುಅಂಶ ವೀಸಾಗಳ ಆನ್‍ಲೈನ್ ನವೀಕರಣಕ್ಕೆ ಓಮನ್ ಅವಕಾಶ ಮಾಡಿಕೊಟ್ಟಿದೆ. ನವೀಕರಣ ಅರ್ಜಿ ಆನ್‍ಲೈನಲ್ಲಿ ಅಸ್ವೀಕಾರವಾದರೆ ಆವೀಸಾವನ್ನು ನವೀಕರಿಸಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳಬೇಕೆಂದು ಆರ್‍ಒಪಿ ಅಧಿಕಾರಿಗಳು ತಿಳಿಸಿದರು. ಕಾಲವಧಿ ಮುಗಿದ ವೀಸಾ ಸಮಯಕ್ಕೆ ತಕ್ಕಂತೆ ನವೀಕರಿಸಿರದಿದ್ದರೆ ದಂಡ ತೆರಬೇಕು. ಲೇಬರ್ ಕಾರ್ಡ್ ನವೀಕರಣಕ್ಕೆ ಹತ್ತು ರಿಯಾಲ್ ದಂಡ, ಎಮಿಗ್ರೇಶನ್ ಫೈನ್ ಆಗಿ 20 ರಿಯಾಲ್ ಈಡುಮಾಡಲಾಗುವುದು. ಲೇಬರ್ ಕಾರ್ಡ್ ನವೀಕರಣ ವಿಳಂಬವಾಗಿದ್ದರೆ ಒಂದು ತಿಂಗಳಿಗೆ 22,500 ರಿಯಾಲ್ ಎಂಬ ಮೊತ್ತದಲ್ಲಿ ದಂಡ ಭರಿಸಬೇಕಾಗುತ್ತದೆ. ಸಮಯ ಅವಧಿ ಮುಗಿದು ಒಂದು ದಿನ ಆದರೂ ಈ ಮೊತ್ತ ಪಾವತಿಸಬೇಕು. ಇದರಲ್ಲಿ 12.5 ರಿಯಾಲ್ ಲೇಬರ್ ಕಾರ್ಡಿನ ಒಂದು ತಿಂಗಳ ಶುಲ್ಕ ಮತ್ತು ಹತ್ತು ರಿಯಾಲ್ ದಂಡವಾಗಿದೆ.

ಮಾರ್ಚ್‌ನಲ್ಲಿ ವಿಮಾನ ನಿಲ್ದಾಣ ಮುಚ್ಚುವ ಮೊದಲು ಸಂದರ್ಶನ ವೀಸಾ ಸಮಯ ಅವಧಿ ಮುಗಿದಿರುವ ವಿದೇಶಿಯರಿಗೆ ಆ ಸಮಯದ ದಂಡ ತೆರುವ ಅಗತ್ಯವಿಲ್ಲ ಎಂದು ಎಮಿಗ್ರೇಶನ್ ವಿಭಾಗದ ವಕ್ತಾರರು ತಿಳಿಸಿದರು. ಉದಾಹರಣೆಗೆ ಮಾರ್ಚಿನಲ್ಲಿ ಎರಡು ತಿಂಗಳ ಮುಂಚೆ ವೀಸಾ ಸಮಯ ಮುಗಿದು ಹೋಗಿದ್ದರೆ ಊರಿಗೆ ಮರಳುವಾಗ ಎರಡು ತಿಂಗಳ ದಂಡ ಮಾತ್ರ ತೆತ್ತರೆ ಸಾಲುತ್ತದೆ. ಎಲ್ಲ ಪ್ರಕರಣಗಳಿಗೂ ಹೆಚ್ಚು ಸಮಯದ ಅನುಕೂಲತೆಗಳನ್ನು ಲಭ್ಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.