ಒಂದು ದೇಶದಲ್ಲಿ ಒಂದು ಧ್ವಜ, ಒಂದು ಸಂವಿಧಾನ ಸಾಕು; ಅಮಿತ್ ಶಾ

0
201

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ.6: ಒಂದು ದೇಶಕ್ಕೆ ಒಂದು ಧ್ವಜ, ಒಂದು ಸಂವಿಧಾನ ಮಾತ್ರ ಇದೆ ಎಂದು ಮೋದಿ ಸರಕಾರ ದೃಢಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಒಂದು ರಾಷ್ಟ್ರ ಧ್ವಜ, ಒಬ್ಬ ಪ್ರಧಾನಿ, ಒಂದು ಸಂವಿಧಾನ ಎಂಬುದು ರಾಜಕೀಯ ಘೋಷಣೆ ಅಲ್ಲ ಎಂಬ ತತ್ವದಲ್ಲಿ ದೃಡವಾದ ವಿಶ್ವಾಸವನ್ನು ಬಿಜೆಪಿ ಹೊಂದಿದೆ ಅದನ್ನು ಜಮ್ಮುಕಾಶ್ಮೀರದಲ್ಲಿ ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.

2019ರಲ್ಲಿ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಪಡಿಸಿದುದರ ಕುರಿತು ಅವರು ಈ ರೀತಿ ಉತ್ತರಿಸಿದ್ದಾರೆ. ಒಂದು ರಾಷ್ಟ್ರ ಧ್ವಜ, ಒಬ್ಬ ಪ್ರಧಾನಿ, ಒಂದು ಸಂವಿಧಾನ ಎಂಬುದು ಒಂದು ರಾಜಕೀಯ ಘೋಷಣೆಯಲ್ಲ ಎಂದು ತೃಣ ಮೂಲಕ ಕಾಂಗ್ರೆಸ್ ನಾಯಕ ಸೌತ ರಾಯಿ ಲೋಕ ಸಭೆಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಅಮಿತ್ ಶಾ ಹೇಳಿದರು.

ಒಂದು ದೇಶದಲ್ಲಿ ಎರಡು ಪ್ರಧಾನಿಗಳು ಹೇಗೆ ಇರಲು ಸಾಧ್ಯ ಎಂದು ಅಮಿತ್ ಶಾ ಆಶ್ಚರ್ಯ ವ್ಯಕ್ತಪಡಿಸಿದರು. ನಿಮ್ಮ ಕೆಲಸಗಳನ್ನು ನಾವು ತಿದ್ದಿದೆವು. ಅದು ಯಾರೇ ಮಾಡಿದ್ದರೂ ಸಹ. ನಿಮ್ಮ ಒಪ್ಪಿಗೆ ಅಸಹಮತ ನಮಗೆ ವಿಷಯವಲ್ಲ. ದೇಶ ಇಡೀ ಅದನ್ನು ಬಯಸಿತ್ತು ಎಂದು ಅಮಿತ್ ಶಾ ಹೇಳಿದರು.

ಒಂದು ಚಿಹ್ನೆ, ಒಂದು ನೇತೃತ್ವ ಒಂದು ಸಂವಿಧಾನ ಎಂದೂ ಚುನಾವಣೆಯ ಘೋಷಣೆಯಲ್ಲ. ಒಂದು ದೇಶ ಒಬ್ಬ ಪ್ರಧಾನಿ ಒಂದು ಧ್ವಜ ಒಂದು ಸಂವಿಧಾನ ಬೇಕು ಎಂದು 1950ರಿಂದ ನಾವು ಹೇಳುತ್ತಿದ್ದೇವೆ. ನಾವು ಅದನ್ನು ಜಾರಿಗೆ ತಂದೆವು ಎಂದು ಅಮಿತ್ ಶಾ ಹೇಳಿದರು.