ಸನ್ಮಾರ್ಗ ವಾರ್ತೆ
ಇರಾನ್ ಜೊತೆಗಿನ ಯುದ್ಧದಿಂದ 12 ಬಿಲಿಯನ್ ಡಾಲರ್ ಅಥವಾ 1.65 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಸೇನಾ ಖರ್ಚುಗಳು, ಇರಾನಿನ ದಾಳಿಯಿಂದ ಉಂಟಾಗಿರುವ ನಾಶ ನಷ್ಟಗಳು, ಯುದ್ಧದಿಂದ ಗಾಯಗೊಂಡವರು ಮತ್ತು ಸಾವಿಗೀಡಾದವರಿಗೆ ನೀಡಬೇಕಾದ ಪರಿಹಾರ, ವ್ಯಾಪಾರ ಸಂಸ್ಥೆಗಳಿಗೆ ಆದ ನಷ್ಟ ಮತ್ತು ಮೂಲಭೂತ ಸೌಕರ್ಯಗಳಿಗೆ ಆಗಿರುವ ನಷ್ಟಗಳು ಈ ಲೆಕ್ಕದಲ್ಲಿ ಸೇರಿವೆ.
ಇದೇ ವೇಳೆ ಇರಾನ್ ದಾಳಿಯಿಂದ 40,000 ಕ್ಕಿಂತಲೂ ಅಧಿಕ ಮನೆ ಮತ್ತು ಶಾಪ್ ಗಳು ದ್ವಂಸವಾಗಿವೆ ಹಾಗೂ 10,600 ಕ್ಕಿಂತಲೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಇವುಗಳನ್ನು ಮತ್ತೆ ಹಿಂದಿನಂತೆ ಮಾಡುವುದಕ್ಕಾಗಿ ಇಸ್ರೇಲ್ ನ ಓಜನ್ ಎಂಬ ಸೇವಾ ಸಂಸ್ಥೆಯು ಚಂದಾ ಸಂಗ್ರಹಿಸುವುದಕ್ಕೆ ಮುಂದಾಗಿದೆ. ಟೈಮ್ಸ್ ಆಫ್ ಇಸ್ರೇಲ್ ಎಂಬ ಪತ್ರಿಕೆಯಲ್ಲಿ ಈ ಕುರಿತಂತೆ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಇಸ್ರೇಲಿನ ರಸ್ತೆಗಳು ನಾಶವಾಗಿವೆ. ಕಟ್ಟಡಗಳು ನಾಶವಾಗಿವೆ. ಮಾತ್ರ ಅಲ್ಲ ಇರಾನಿನ ಕ್ಷಿಪಣಿಗಳನ್ನು ತಡೆಯುವುದಕ್ಕಾಗಿ ಆಯೋಜಿಸಲಾದ ಪ್ರತಿರೋಧ ವ್ಯವಸ್ಥೆಗೆ ಇಸ್ರೇಲ್ ಪಾರ್ಲಿಮೆಂಟ್ 500 ಕೋಟಿ ಡಾಲರ್ ಮೊತ್ತವನ್ನು ಈ ಮೊದಲೇ ಬಿಡುಗಡೆಗೊಳಿಸಿತ್ತು ಎಂದು ಇಸ್ರೇಲಿನ ಬಿಸಿನೆಸ್ ದೈನಿಕ ವಾಗಿರುವ ಕಾಲ್ ಕಾಲ್ ಕಲಿಟ್ಸ್ ವರದಿ ಮಾಡಿದೆ.
ಇಸ್ರೇಲ ಇನ್ನೊಂದು ಪತ್ರಿಕೆ ಯೆಡಿಯೊತ್ ಅಹ್ ರೋನೋತ್ ಪ್ರಕಾರ, ಸರ್ಕಾರಿ ಖಜಾನೆಗೆ 6.46 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಸುಮಾರು 40 ಸಾವಿರಕ್ಕಿಂತಲೂ ಅಧಿಕ ಮನೆಗಳು ಉದ್ಯಮ ಕೇಂದ್ರಗಳು ಧ್ವಂಸವಾಗಿವೆ. 10,600 ಕ್ಕಿಂತ ಅಧಿಕ ಜನರನ್ನು ಸ್ಥಳಾಂತರ ಗೊಳಿಸಲಾಗಿದೆ ಎಂದು ಹೇಳಿದೆ.












