ಸನ್ಮಾರ್ಗ ವಾರ್ತೆ
ಹೊಸದಿಲ್ಲಿ : ವ್ಯಾಕ್ಸಿನ್ ತೆಗೆದ ಎರಡು ವಾರಗಳೊಳಗೆ ಬಿಜೆಪಿ ಸಂಸದ, ನಟ ಪರೇಶ್ ರಾವಲ್ರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಸ್ವತಃ ಕ್ವಾರಂಟೈನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪರೇಶ್ ರಾವಲ್ ತನಗೆ ಕೊರೊನ ಬಂದಿರುವುದನ್ನು ತಿಳಿಸಿದ್ದು, ಮಾರ್ಚ್ 9ರಂದು 65 ವರ್ಷದ ತಾನು ಕೊವಿಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.
ದುರದೃಷ್ಟವಶಾತ್ , ನಾನು ಕೊರೊನ ಪಾಸಿಟಿವ್. ಕಳೆದ ಹತ್ತು ದಿವಸಗಳಿಂದ ನನ್ನನ್ನು ಸಂಪರ್ಕಿಸಿದವರು ಕೊರೋನ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಮನವಿ ಮಾಡುತ್ತೇನೆ ಎಂದು ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದಿದ್ದಾರೆ. ಮಾರ್ಚ್ 9ಕ್ಕೆ ಕೊರೊನ ವ್ಯಾಕ್ಸಿನ್ ಮೊದಲ ಡೋಸ್ ಸ್ವೀಕರಿಸಿದ ವಿವರವನ್ನು ಅವರು ಟ್ವೀಟ್ ಮಾಡಿದ್ದರು. ವಿ ಫೋರ್ ವ್ಯಾಕ್ಸಿನ್ಸ್, ಡಾಕ್ಟರ್, ನರ್ಸಸ್, ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗೂ ಎಲ್ಲರಿಗೂ ಕೃತಜ್ಞತೆಗಳು ಎಂದಿದ್ದರು.ನರೇಂದ್ರ ಮೋದಿಗೂ ಕೃತಜ್ಞತೆ ಸೂಚಿಸಿ ಅವರು ಟ್ವೀಟ್ ಮಾಡಿದ್ದರು. ಆದರೆ ಸದ್ಯ ಅವರು ಕೊರೋನಾ ಪಾಸಿಟಿವ್ ಆಗಿರುವುದು ವ್ಯಾಕ್ಸಿನ್ ಎಷ್ಟು ಸುರಕ್ಷಿತ ಎಂಬ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.












