ಪಶ್ಚಿಮ ಬಂಗಾಳದಲ್ಲಿ ಶಾಸಕ ಸಹಿತ 10 ಜಿಲ್ಲಾ ಪಂಚಾಯತ್ ಸದಸ್ಯರು ಬಿಜೆಪಿಗೆ: ಇದು ಟ್ರೇಲರ್ ಮಾತ್ರ, ಸಿನಿಮಾ ಮತ್ತೆ ಬರಲಿದೆ-ಮುಕುಲ್ ರಾಯ್

0
736

ಕೊಲ್ಕತಾ, ಜೂ. 25: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನ ಓರ್ವ ಶಾಸಕ ಸಹಿತ ಹತ್ತು ಜಿಲ್ಲಾ ಪಂಚಾಯತ್ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಶಾಸಕ ವಿಲ್ಸನ್ ಚಂಪ್ರಮಾರಿ, ದಕ್ಷಿಣ ದಿನಜ್‍ಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಲಿಪಿಕಾ ರಾಯ್ ಮತ್ತು ಒಂಬತ್ತು ಜಿಲ್ಲಾ ಪಂಚಾಯತ್ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು.

ಅಧ್ಯಕ್ಷೆಯ ಸಹಿತ ಹತ್ತು ಸದಸ್ಯರು ಪ್ರತಿಪಕ್ಷ ಬಿಜೆಪಿಗೆ ಸೇರ್ಪಡೆಯಾದ್ದರಿಂದ ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯುವಂತಾಗಿದೆ. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ದಿನಜ್‍ಪುರ ಜಿಲ್ಲಾ ಪಂಚಾಯತ್ ಪ್ರತಿಪಕ್ಷ ಆಡಳಿತ ನಡೆಸುತ್ತಿರುವ ಜಿಲ್ಲಾ ಪಂಚಾಯತ್ ಆಗಿ ಮಾರ್ಪಟ್ಟಿದೆ. 2018ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ 22 ಜಿಲ್ಲಾ ಪಂಚಾಯತ್‍ಗಳಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ತೃಣಮೂಲ ಮಾಜಿ ಶಾಸಕ ದಕ್ಷಿಣ ದಿನಜ್‍ಪುರ ಯುನಿಟ್ ಮಾಜಿ ಅಧ್ಯಕ್ಷ ಬಿಪ್ಲವ್ ಮಿತ್ರ ಬಿಜೆಪಿಗೆ ವಲಸೆ ಹೋಗಿದ್ದಾರೆ. ವಿಲ್ಸನ್ ಇತ್ತೀಚೆಗೆ ಬಿಜೆಪಿಯ ಸೆರಗು ಹಿಡಿದ ಐದನೆ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕರ ಸಾಮೂಹಿಕ ಪಕ್ಷಾಂತರದ ಟ್ರೈಲರ್ ಮಾತ್ರ ಇದು. ಸಿನಿಮಾ ನಂತರ ಬರಲಿದೆ ಎಂದು ಈ ಹಿಂದೆ ಪಕ್ಷ ತೊರೆದ ಮುಕುಲ್ ರಾಯ್ ಹೇಳಿದ್ದರು.