ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.13: ನ್ಯೂಟನ್ನ ಗುರತ್ವಾಕರ್ಷಣೆ ಸಿದ್ಧಾಂತವನ್ನಹ ಐನ್ಸ್ಟಿನ್ನದ್ದೆಂದು ಹೇಳಿಕೆ ನೀಡಿ ವ್ಯಂಗ್ಯಾತ್ಮಕ ಟ್ರಾಲ್ಗಳಿಗೆ ಗುರಿಯಾದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟೀಕರಣ ನೀಡಿದ್ದು “ತಪ್ಪು ಎಲ್ಲರಿಂದಲೂ ಸಂಭವಿಸಬಹುದು. ತನ್ನಿಂದಾದ ತಪ್ಪುಗಳ ಕುರಿತು ಹೆದರುವಂತ ವ್ಯಕ್ತಿಗಳಲ್ಲಿ ತಾನಿಲ್ಲ” ಎಂದು ಅವರು ಹೇಳಿದರು. ಭಾರತದ ಅರ್ಥವ್ಯವಸ್ಥೆಯ ಕುರಿತ ಹೇಳಿಕೆಯಲ್ಲಿ ವಿಶೇಷ ಸಂದರ್ಭದಲ್ಲಿ ಹೇಳಿದ್ದನ್ನು ಮಾತ್ರ ತೆಗೆದು ಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ದುರುದ್ದೇಶವಿದೆ ಎಂದರು.
ಗುರುತ್ವಾಕರ್ಷಣೆ ಕಂಡು ಹಿಡಿಯುವುದರಲ್ಲಿ ಐನ್ಸ್ಟೀನ್ಗೆ ಗಣೀತ ಏನೂ ಪ್ರಯೋಜನವಾಗಿಲ್ಲ ಎಂದು ಗೋಯಲ್ ಹೇಳಿದ್ದರು. ಜಿಡಿಪಿ ಕುರಿತು ಟಿವಿಯಲ್ಲಿ ಕಾಣುವ ಲೆಕ್ಕಗಳ ಹಿಂದೆ ಹೋಗಬೇಡಿರಿ. ಐದು ಟ್ರಿಲಿಯನ್ ಅರ್ಥ ವ್ಯವಸ್ಥೆಯಲ್ಲಿ ಶೇ 12ರಷ್ಟು ಬೆಳವಣಿಗೆ ಲೆಕ್ಕವಾಗಿದೆ. ಇದರಲ್ಲಿ ಈಗಿನ ಆರು ಶೇಕಡ ಬೆಳವಣೆಗೆ ಆರಂಭಿಕ ಲೆಕ್ಕದ ಹಿಂದೆ ಜನರು ಹೋಗಬೇಡಿರಿ. ಎಂದು ಪಿಯುಷ್ ಹೇಳಿದ್ದರು. ಜಿಡಿಪಿಯ ವಿವರಣೆಯಲ್ಲಿ ಪಿಯೂಷ್ರಹೇಳಿಕೆಯನ್ನೇ ಬೆಟ್ಟು ಮಾಡಿ ಹಲವರು ಟ್ರಾಲ್ ಮಾಡಿದ್ದರು. ಅದು ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ.












