ಕಲಬುರ್ಗಿಯ ಕೋವಿಡ್ ಆಸ್ಪತ್ರೆಯಲ್ಲಿ ಹಂದಿಗಳ ಹಿಂಡು; ನೈರ್ಮಲ್ಯ ವ್ಯವಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚಿದ ಆತಂಕ

0
362

ಸನ್ಮಾರ್ಗ ವಾರ್ತೆ

ಕಲಬುರ್ಗಿ,ಜು.20: ಶುಚಿತ್ವ ಇಲ್ಲದ ಕೊರೋನ ಆಸ್ಪತ್ರೆಗಳು ರಾಜ್ಯದಲ್ಲಿವೆ ಎಂಬುದಕ್ಕೆ ಕಲಬುರ್ಗಿಯ ಕೊರೋನ ಆಸ್ಪತ್ರೆಯು ಗುರಿಯಾಗಿದ್ದು, ಹಂದಿಗಳ ಹಿಂಡು ನಿರಾತಂಕವಾಗಿ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಸುತ್ತಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ಕೊರೋನ ಆಸ್ಪತ್ರೆಯ ವರಾಂಡದಲ್ಲಿ ಹಂದಿಗಳು ಗುಂಪಾಗಿ ನಡೆದಾಡುತ್ತಿರುವ ವೀಡಿಯೊ ಹೊರಬಂದಿದೆ.

ಆಸ್ಪತ್ರೆಯ ಮಾಲಿನ್ಯ ತಿನ್ನಲು ಹಂದಿಗಳು ಇಲ್ಲಿಗೆ ಬರುವುದು. ಇದು ಕೂಡ ಕೊರೋನ ವ್ಯಾಪಕವಾಗಿ ಹರಡಲು ಕಾರಣವಾಗಬಹುದೇ ಎಂಬ ಆತಂತಕವಿದೆ. ಇದೇ ವೇಳೆ, ಹಂದಿಗಳು ಆಸ್ಪತ್ರೆಯಲ್ಲಿ ನಡೆದಾಡಿದರೂ ಆರೋಗ್ಯ ಕಾರ್ಯಕರ್ತರಾಗಲಿ ಆಸ್ಪತ್ರೆಯ ಆಡಳಿತ ಮಂಡಳಿಯಾಗಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ.

ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾದ ಬಳಿಕ ಕಾಂಗ್ರೆಸ್ ನಾಯಕರು ಪ್ರತಿಭಟಿಸಿ ರಂಗ ಪ್ರವೇಶಿಸಿದರು. ಆಸ್ಪತ್ರೆ ನಿರ್ವಹಿಸುವವರ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣವೆಂದು ಆರೋಪಿಸಿದ್ದಾರೆ. ತದನಂತರ ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇಂತಹ ಘಟನೆಗಳು ಇನ್ನು ಆಗದಂತೆ ನೋಡಿಕೊಳ್ಳಬೇಕೆಂದು ಆಸ್ಪತ್ರೆಯ ಅಧಿಕಾರಿಗಳನ್ನು ಎಚ್ಚರಿಸಿದ್ದಾಗಿ ವರದಿಯಾಗಿದೆ.

ಕಲಬುರ್ಗಿಯಲ್ಲಿ 2674 ಕೊರೋನ ಪ್ರಕರಣ ದೃಢಪಟ್ಟಿವೆ. ರಾಜ್ಯದ ಮೊದಲ ಸಾವು ಇಲ್ಲಿಯೇ ಸಂಭವಿಸಿತ್ತು. ಕರ್ನಾಟಕದಲ್ಲಿ ಹೊಸದಾಗಿ 4537 ಮಂದಿಗೆ ಕೊರೋನ ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 59,652 ಸೋಂಕು ಪ್ರಕರಣಗಳು ವರದಿಯಾಗಿವೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.