ಜನರೇ, ಎರಡು ದಿನ ಮನೆಯಲ್ಲೇ ಇರಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.3: ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಬಡಿಯಲಿದೆ ಎಂದು ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಎರಡು ದಿವಸ ಮನೆಯಲ್ಲಿರುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿರುವ ರಾಜ್ಯವಾಗಿದ್ದು ಈದೀಗ ಚಂಡಮಾರುತದ ಅಪಾಯವೂ ಅದರ ಮುಂದೆ ಬಂದು ನಿಂತಿದೆ.

ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿರಿ ಎಂದು ಮುಂಬೈ ನಿವಾಸಿಗಳಿಗೆ ಮುಖ್ಯಮಂತ್ರಿ ಹೇಳಿದರು. ಗಂಟೆಗೆ 100 ಕಿಲೊ ಮೀಟರ್ ವೇಗದಲ್ಲಿ ಚಂಡಮಾರುತ ಬೀಸಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ವಿದ್ಯುತ್ ಅಡೆತಡೆ ಉಂಟಾಗುವ ಸಾಧ್ಯತೆಯೂ ಇದೆ. ಗಾಡ್ಜೆಟ್‍ಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳಿರಿ. ಎಮರ್ಜನ್ಸಿ ಲೈಟ್‌ಗಳನ್ನು ಇಟ್ಟುಕೊಳ್ಳಿರಿ ಎಂಬ ಸೂಚನೆಯನ್ನು ಜನರಿಗೆ ನೀಡಲಾಗಿದೆ.

ಇದುವರೆಗೆ ರಾಜ್ಯ ಎದುರಿಸಿದ್ದಕ್ಕಿಂತ ಹೆಚ್ಚು ವೇಗದ ಚಂಡಮಾರುತವಿದು. ಕರಾವಳಿ ಪ್ರದೇಶಗಳಲ್ಲಿ ಬುಧವಾರ, ಗುರುವಾರ ನಿರ್ಣಾಯಕ ದಿನವಾಗಿರುತ್ತದೆ. ಲಾಕ್‌ಡೌನ್ ಸಡಿಲಿಕೆ ತೀರ್ಮಾನ ಎರಡು ದಿವಸಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಜನರು ಜಾಗರೂಕರಾಗಿರಬೇಕೆಂದು ಅವರು ಆಗ್ರಹಿಸಿದ್ದಾರೆ.

ಓದುಗರೇ,ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.