ಆರೋಗ್ಯ ಸೇವೆಗೂ ರೋಶ್ನಿಯವರಿಗೆ ಸೈಕಲ್ ಸವಾರಿಯೇ ಲೇಸು

0
589

ಸನ್ಮಾರ್ಗ ವಾರ್ತೆ

ಕೇರಳ,ಜೂ.3: ಸೈಕಲ್‌ನಲ್ಲಿ ಹೋಗಿ ಜನರ ಆರೋಗ್ಯ ವಿವರವನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿರುವ ರೋಶ್ನಿ ಕೇರಳದ ಇರವಿಪುರಂ ಪ್ರಾಥಮಿಕ ಆರೋಗ್ಯದ ಆಶಾಕಾರ್ಯಕರ್ತೆಯಾಗಿದ್ದಾರೆ. ದಿನಾಲೂ ಹದಿನೈದು ಕಿಲೊ ಮೀಟರ್ ಸೈಕಲ್ ತುಳಿಯುತ್ತಾ ಆರೋಗ್ಯ ವಿವರಗಳನ್ನು ಸಂಗ್ರಹಿಸುತ್ತಾರೆ.

ಕಾರ್ಪೊರೇಷನ್ ವ್ಯಾಪ್ತಿಯ 622 ಮನೆಗಳ ಹೊಣೆ ಇವರಿಗಿದ್ದು ಒಂಬತ್ತನೆ ವಯಸ್ಸಿನಿಂದಲೂ ರೋಶ್ನಿಯಮ್ಮ ಸೈಕಲ್ ತುಳಿಯುವುದನ್ನು ಆರಂಭಿಸಿದವರು. ಮನೆಯವರು ಸೈಕಲ್ ಕೊಡಿಸಿರಲಿಲ್ಲ. ಮದುವೆಯಾದ ಬಳಿಕ ಪತಿ ಸುನೀಲ್ ಕುಮಾರ್‌ರಿಂದ ಸೈಕಲ್ ಖರೀದಿಸಿ ತರುವಂತೆ ಮಾಡಿದರು. ಇವರಿಗೆ ಪತಿಯ ತಾಯಿ ರಾಧಾ ಕೂಡ ಪ್ರೇರಣೆಯೂ ಆದರು. ಇರವಿಪುರಂ, ಸ್ನೇಹ ತೀರಂ, ವಳ್ಳಕ್ಕಡವ್‍ಗಳಿಗೆ ಇವರು ಮತ್ತು ಇವರ ಸೈಕಲ್ ಪರಿಚಿತವೇ ಆಗಿದೆ. ಪೆಟ್ರೋಲಿಗೆ ಬೆಲೆ ಹಚ್ಚು. ಟ್ರಾಫಿಕ್ ಬ್ಲಾಕ್ ಬೇರೆ ಇದು ಯಾವುದೂ ರೋಶ್ನಿಗೆ ಅಡಚಣೆಯಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.