ಸನ್ಮಾರ್ಗ ವಾರ್ತೆ
ಜುಲೈ 11 ರಂದು ಶುಕ್ರವಾರದಂದು ಹಿರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು.
ವಿದ್ಯಾರ್ಥಿ ನಾಯಕ ಬಾರಿಝ್ ಅಲಿ ಉಪ ನಾಯಕಿ ರಿಹಾನ ಮೊಹಮ್ಮದ್ ಅಶ್ರಫ್ ಹಾಗೂ ಇತರ ಮಂತ್ರಿಗಳಾದ ಶಿಸ್ತು ಮಂತ್ರಿ, ಸಾಂಸ್ಕೃತಿಕ ಮಂತ್ರಿ , ಸ್ವಚ್ಛತಾ ಮಂತ್ರಿ, ಹಣಕಾಸು ಮಂತ್ರಿ, ಚಾರ್ಟ್ ಮಂತ್ರಿ, ನಮಾಜ್ ಉಸ್ತುವಾರಿ ಮಂತ್ರಿ ಹಾಗೂ ಅವರ ಸಹಾಯಕ ಮಂತ್ರಿಗಳನ್ನು ಒಳಗೊಂಡ ತಂಡವು ಅತಿಥಿಗಳನ್ನು ಸಭಾಂಗಣಕ್ಕೆ ಕರೆತಂದರು.
ಮೊದಲಿಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ಇದರ ಕಾರ್ಯದರ್ಶಿಯವರಾದ ಜನಾಬ್ ಅಬ್ದುಲ್ ಕರೀಂ, ಶಾಲಾ ಸಂಚಾಲಕರಾದ ಜನಾಬ್ ಅಬ್ದುಲ್ ರಹಮಾನ್, ಹಿರಾ ವಿಮೆನ್ಸ್ ಕಾಲೇಜಿನ ಸಂಚಾಲಕರಾದ ಜನಾಬ್ ರಹಮತುಲ್ಲಾ, ಆಡಳಿತಾಧಿಕಾರಿ ಜಾಕಿರ್ ಹುಸೇನ್, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಇಫ್ತಿಖಾರ್ ಅಹಮದ್ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ರೀನಾ ವೇಗಸ್ ಹಾಗೂ ಆಯಿಷಾ ಅಫ್ರಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವ ಮತ್ತು ಜವಾಬ್ದಾರಿಯ ಬಗ್ಗೆ ಮಾತನಾಡಿದರು.
ಮುಖ್ಯೋಪಾಧ್ಯಾಯರು ಶಾಲೆಯ ದೃಷ್ಟಿಕೋನ ಮತ್ತು ಗುರಿಗಳನ್ನು ವಿವರಿಸಿದ್ದರು. ಶಾಲಾ ನಾಯಕರು ಪ್ರಮಾಣವಚನ ಸ್ವೀಕರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು.












