ಭಾರತದ ಗಡಿಯನ್ನು ಪ್ರಧಾನಿಯವರು ಚೀನಾದ ವಶಕ್ಕೊಪ್ಪಿಸಿದ್ದಾರೆ: ರಾಹುಲ್ ಗಾಂಧಿ ಆರೋಪ

0
569

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.20: ಭಾರತ -ಚೀನ ಘರ್ಷಣೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ತೀಕ್ಷ್ಣ ಟೀಕೆ ಮಾಡಿದ್ದಾರೆ. ಚೈನೀಸ್ ಅತಿಕ್ರಮದ ಮುಂದೆ ಮೋದಿ ಭಾರತದ ಗಡಿಯನ್ನು ಸರೆಂಡರ್ ಮಾಡಿದರೆಂದು ರಾಹುಲ್ ಗಾಂಧಿ ಟ್ವೀಟ್‍ನಲ್ಲಿ ಅಪಾದಿಸಿದ್ದಾರೆ.

ಮೋದಿಯೊಂದಿಗೆ ಕೆಲವು ಬಲವಾದ ಪ್ರಶ್ನೆಯನ್ನು ರಾಹುಲ್ ಮುಂದಿಟ್ಟಿದ್ದಾರೆ. ಚೀನದ ಭೂಪ್ರದೇಶವಾಗಿದ್ದರೆ ಹೇಗೆ ನಮ್ಮ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಎಲ್ಲಿ ಅವರು ಹತ್ಯೆಯಾದರು ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಭಾರತದೊಂದಿಗೆ ಒಂದಿಂಚು ಭೂಮಿ ಕೂಡ ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ಹೇಳಿದ ಬೆನ್ನಿಗೆ ರಾಹುಲ್ ಗಾಂಧಿ ಟೀಕೆ ಮಾಡಿದರು. ಭಾರತದ ಗಡಿಯನ್ನು ಯಾರೂ ಅತಿಕ್ರಮಿಸಿಲ್ಲ. ಭಾರತದ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿಲ್ಲ ಎಂದು ಸರ್ವಪಕ್ಷ ಸಭೆಯ ಬಳಿಕ ಪ್ರಧಾನಿ ಹೇಳಿದರು. ಲಡಾಕ್‌ನ ಗಲ್ವಾನ್‍ನಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ವೀರ ಮೃತ್ಯುವನ್ನಪ್ಪಿದ್ದರು.

ಗಲ್ವಾನ್ ಘಾಟಿಯಲ್ಲಿ ಕಳೆದ ಸೋಮವಾರ ರಾತ್ರೆ ಎರಡು ದೇಶಗಳ ನಡುವೆ ಘರ್ಷಣೆ ನಡೆದಿತ್ತು. 43ರಷ್ಟು ಚೀನದ ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತದ ಸೈನಿಕ ಮೂಲಗಳನ್ನು ಉದ್ಧರಿಸಿ ಎಎನ್‍ಐ ವರದಿ ಮಾಡಿದ್ದರೂ ಚೀನಾ ದೃಢಪಡಿಸಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.