ವೆಂಟಿಲೇಟರ್ ಸ್ವಿಚ್ಛ್ ಕಿತ್ತು ಏರ್ ಕೂಲರ್ ಚಾಲು ಮಾಡಿದ ಸಂಬಂಧಿಕರು: ರೋಗಿಯ ದಾರುಣ ಸಾವು

0
494

ಸನ್ಮಾರ್ಗ ವಾರ್ತೆ

ಕೋಟ್ಟ,ಜೂ.20: ವೆಂಟಿಲೇಟರ್ ಸ್ವಿಚ್ಛ್ ಬದಲಿಗೆ ಪ್ರಮಾದವಶಾತ್ ಏರ್ ಕೂಲರ್ ಚಾಲು ಮಾಡಿದ ಪರಿಣಾಮವಾಗಿ ರಾಜಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ 40 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೋಟ್ಟ ಜಿಲ್ಲೆಯ ಮಹಾರಾವು ಭೀಮ್ ಸಿಂಗ್ (ಎಂಬಿಎಸ್) ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.

ಕೊರೋನ ಶಂಕೆಯಲ್ಲಿ ಮರಣಾಸನ್ನ ಸ್ಥಿತಿಯಲ್ಲಿ ಜೂನ್ 13ಕ್ಕೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದ ಈತನ ಕೊರೋನ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ವರದಿ ಬಂದಿತ್ತು. ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲಿ ಇನ್ನೊಬ್ಬ ರೋಗಿಗೆ ಕೊರೋನ ದೃಢಪಟ್ಟಿದ್ದು, ಕೊರೞನ ರೋಗಿಯನ್ನು ಅಲ್ಲಿಯೇ ಉಳಿಸಿ ಕೊರೋನ ಇಲ್ಲವೆಂದು ದೃಢಪಟ್ಟಿದ್ದ ರೋಗಿಯನ್ನು ಜೂನ್ 15ಕ್ಕೆ ಐಸೊಲೇಶನ್ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು.

ಐಸೊಲೇಶನ್ ವಾರ್ಡಿನಲ್ಲಿ ಈತನಿಗೆ ವೆಂಟಿಲೇಟರ್‍‌ನಲ್ಲಿ ಇರಿಸಲಾಗಿತ್ತು. ಸಂಬಂಧಿಕರಲ್ಲಿ ಒಬ್ಬರು ರೋಗಿಯ ಬಳಿ ಇದ್ದರು. ಐಸೊಲೇಶನ್ ವಾರ್ಡಿನಲ್ಲಿ ಉಷ್ಣತೆ ಅನುಭವಾದಾಗ ಸಂಬಂಧಿಕನೇ ಏರ್ ಕೂಲರ್ ಖರೀದಿಸಿದ್ದ. ನಂತರ ಸಮೀಪದ ಸ್ವಿಚ್ಛ್ ಪ್ಲಗ್‍ನ್ನು ತೆಗೆದು ಕೂಲರ್ ಆನ್ ಮಾಡಿದ್ದಾನೆ. ಅದರಲ್ಲಿ ವೆಂಟಿಲೇಟರ್ ಪ್ಲಗ್ ಇತ್ತು. ಅದನ್ನು ತೆಗೆದದ್ದರಿಂದ ಅರ್ಧಗಂಟೆಯಲ್ಲಿ ವೆಂಟಿಲೇಟರ್ ಕೆಲಸ ಮಾಡುವುದನ್ನು ನಿಲ್ಲಿಸಿತು.

ರೋಗಿಗೆ ಅಸ್ವಾಸ್ಥ್ಯ ಕಂಡು ಬಂದೊಡನೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸ್ಥಳಕ್ಕೆ ಬಂದರು. ಕೂಡಲೇ ಪ್ರಥಮ ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆಯ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಗೆ ರೂಪು ನೀಡಲಾಗಿದೆ. ಆದರೆ ಸಮಿತಿಯ ಮುಂದೆ ಹೇಳಿಕೆ ನೀಡಲು ಆರೋಪಕ್ಕೆ ಗುರಿಯಾದ ರೋಗಿಯ ಸಂಬಂಧಿಕ ನೀಡಲು ತಯಾರಾಗಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ರೋಗಿಯನ್ನು ಉಪಚರಿಸುತ್ತಿದ್ದ ವೈದ್ಯರು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.