ಶಬ್ರಿನಾ ಸಿದ್ದೀಕಿ ಪ್ರಶ್ನೆಗೆ ಬೇರೆಯದೇ ಉತ್ತರ ಕೊಟ್ಟ ಪ್ರಧಾನಿ ಮೋದಿ: ಅಮೇರಿಕಾದಲ್ಲಿ ನಡೆದದ್ದೇನು?

0
466

ಸನ್ಮಾರ್ಗ ವಾರ್ತೆ

✍️ಮುಹಮ್ಮದ್ ಮರಕಡ

ಪ್ರಧಾನಿ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಿಂದ ಭಾರತ ಮತ್ತು ವಿಶ್ವದಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮುಜುಗರ ಪಡುತ್ತಿದ್ದದ್ದು ಯಾಕಾಗಿ ಎಂದುದು ಇತ್ತೀಚೆಗೆ ಅಮೇರಿಕಾದ ಶ್ವೇತ ಭವನದಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಗೋಚರಿಸಿದೆ.

ವಿಶ್ವ ವೇದಿಕೆಯಲ್ಲಿ ಕೇಳಿದ ಪ್ರಶ್ನೆಯ ಬಗ್ಗೆ ಇರುಸು ಮುರುಸುಗೊಂಡ ಈ ಮಹಾನ್ ದೇಶದ ಪ್ರಧಾನಿಯವರಿಗೆ ಅದು ಅವರ ಮೇಲೆ ಯಾವ ಪ್ರಭಾವ ಬೀರಿತು ಎಂಬುದು ಅವರ ಮುಖ ಚರ್ಯೇಯೇ ಹೇಳುತ್ತಿತ್ತು. ಇದರಿಂದ ಅವರಿಗೆ ಹಾಗೂ ಇಡೀ ದೇಶಕ್ಕೆ ಅಮೇರಿಕಾದಲ್ಲಿ ದೊಡ್ಡ ಅವಮಾನ ಆಗಿದೆ. ಇದನ್ನು ಹುಟ್ಟು ಹಾಕಿದವರು ಬೇರೆ ಯಾರೂ ಅಲ್ಲ. ಅವರ ಸಚಿವರು, ಅವರ ಆಡಳಿತದ ನಾಯಕರು, ಸಂಘ ಪರಿವಾರ ಸಂಘಟನೆಗಳ ನಾಯಕರು, ಐಟಿ ಸೆಲ್, ಭಟ್ಟಂಗಿ ಚಾನೆಲ್‌ಗಳು. ಇವರೆಲ್ಲರ ಕಳೆದ 9 ವರ್ಷಗಳ ಕಾರ್ಯವೈಖರಿಯ ಫಲವಾಗಿ ಅಮೇರಿಕಾದಲ್ಲಿ ಭಾರತಕ್ಕೆ ತೀವ್ರ ಮುಜುಗರ ತಂದಿದೆ. ವಿಶ್ವದಾದ್ಯಂತ ಪತ್ರಿಕೆಗಳು ಈ ಸುದ್ಧಿಯನ್ನು ಪ್ರಕಟಿಸುತ್ತಿದೆ. ಅವರ ಅಮೇರಿಕಾ ಭೇಟಿಯ ಹೊಳಪು ಮಣ್ಣು ಪಾಲಾಗಿದೆ.  ರಾಷ್ಟ ಪತಿ ಬೈ ಡನ್ ಪತ್ನಿಗೆ  ಉಡುಗೊರೆಯಾಗಿ ವಜ್ರವನ್ನು ನೀಡಿ ತನಗಾಗಿ ಏನೂ ಸಾಧಿಸಲಿಲ್ಲ ಎಂಬಂತಾಗಿದೆ.

“ಪ್ರಧಾನ ಮಂತ್ರಿಗಳೇ ಭಾರತವು ತಾವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಿಮ್ಮ ಸರಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದೆ. ಟೀಕಾಕಾರಗಳ ಬಾಯಿ ಮುಚ್ಚಿಸಲಾಗಿದೆ ಅಂತ ಅನೇಕ ಮಾನವ ಹಕ್ಕುಗಳ ಗುಂಪುಗಳು ದೂರುತ್ತವೆ. ನೀವು ಶ್ವೇತ ಭವನದಲ್ಲಿದ್ದೀರಿ. ಇಲ್ಲಿ ಅನೇಕ ವಿಶ್ವ ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪುನರುಚಿಸಿದರು. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳು ಸುಧಾರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸಲು ನೀವು ಮತ್ತು ನಿಮ್ಮ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ.”? ಇದು ಪ್ರಧಾನಿ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯಾಗಿದೆ.

ಈ ಪ್ರಶ್ನೆಯನ್ನು ಪ್ರಧಾನಿಗೆ ಕೇಳಿದ್ದು ವಾಲ್ ಸ್ಟ್ರೀ ಟ್ ಜರ್ನಲ್ ಶಬರಿನ ಸಿದ್ದೀಕಿ. ಪ್ರಶ್ನೆಯನ್ನು ಕೇಳಿದ ಭಾರತದ ಪ್ರಧಾನಿ ನಕಲು ಮಾಡುವಾಗ ಮೇಷ್ಟ ಮುಂದೆ ಸಿಕ್ಕಿಬಿದ್ದ ವಿದ್ಯಾರ್ಥಿಯಂತೆ ಮುಖ ಬಾಡಿಸಿ ನಿಂತಿದ್ದರು. ಬಳಿಕ ಅವರು ನೀಡಿದ ಉತ್ತರ ಹೀಗಿತ್ತು “ಜನ ಹೀಗೆ ಹೇಳಿಕೊಳ್ಳುತ್ತಾರೆ ಅಂತ ನೀವು ಹೇಳಿದ್ದು ಕೇಳಿ ನನಗೆ ಆಶ್ಚರ್ಯ ಆಯ್ತು. ಹೇಳುವುದು ಮಾತ್ರ ಅಲ್ಲ ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಬೈ ಡನ್‌ರವರು ಹೇಳಿದಂತೆ ಭಾರತ ಅಮೆರಿಕ ಈ ಎರಡು ದೇಶಗಳ ಜೀವಗಳ ಮೇಲೆ ಪ್ರಭುತ್ವ ಇದೆ. ಪ್ರಜಾಪ್ರಭುತ್ವ ನಮ್ಮ ಸ್ಫೂರ್ತಿಯಾಗಿದೆ. ಅದು ನಮ್ಮ ನರನಾಡಿಗಳಲ್ಲಿ ಇದೆ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತೇವೆ. ನಮ್ಮ ಪೂರ್ವಜರು ಅದನ್ನೇ ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ. ನಮ್ಮ ಸರಕಾರವು ಪ್ರಜಾಪ್ರಭುತ್ವದ ಆಧಾರದ ಮೇಲೆ ರಚನೆಯಾದ ಸಂವಿಧಾನದ ಪ್ರಕಾರ ನಡೆಯುತ್ತಿದೆ. ನಮ್ಮ ಸಂವಿಧಾನ ಹಾಗೂ ನಮ್ಮ ಸರಕಾರದಲ್ಲಿ ಯಾವುದೇ ಧರ್ಮ ಜಾತಿ ಲಿಂಗ ಹಾಗೂ ವರ್ಗಭೇದ ಮಾಡೋದಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ಮಾನವೀಯ ಮೌಲ್ಯಗಳು, ಮಾನವೀಯತೆ, ಮಾನವ ಹಕ್ಕುಗಳು ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವವೇ ಅಲ್ಲ. ನಾವು ಪ್ರಜಾಪ್ರಭುತ್ವ ಅಂತ ಹೇಳಿದ ಮೇಲೆ ಅದನ್ನು ಸ್ವೀಕರಿಸಿದ ಮೇಲೆ ಆ ಪ್ರಕಾರವೇ ಬದುಕುತ್ತಿರುವಾಗ ಅಲ್ಲಿ ಬೇದಭಾವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಭಾರತ ಸಬ್ಕಾಸಾಥ್ ಸಬ್‌ಕಾ ವಿಕಾಸ್ ಸಬ್‌ಕಾ ವಿಶ್ವಾಸ್ ಸಬ್‌ಕಾ ಪ್ರಯಾಸ್. ಈ ಮೂಲಭೂತ ಸಿದ್ಧಾಂತದ ಮೇಲೆ ನಾವು ನಡೆಯುತ್ತೇವೆ. ಸರರ್ಕಾರದ ಸೌಲಭ್ಯಗಳು ಎಲ್ಲರಿಗೂ ಸಿಗುತ್ತವೆ. ಯಾರೆಲ್ಲ ಅದಕ್ಕೆ ಅರ್ಹರು ಅವರೆಲ್ಲರಿಗೂ ಸಿಗುತ್ತೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಧರ್ಮ, ಜಾತಿ, ವಯಸ್ಸು, ವಿಭಾಗ ಇವುಗಳ ಆಧಾರದಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ.” ಪ್ರಧಾನ ಮಂತ್ರಿಯವರು ಉತ್ತರವಾಗಿ ಏನೆನ್ನೋ ಹೇಳಿದರಾದರೂ ಅದು ಸರಿಯಾದ ಉತ್ತರವಾಗಿರಲಿಲ್ಲ. ಖಂಡಿತವಾಗಿಯೂ ಆ ಪ್ರಶ್ನೆಗೆ ಅದು ಪರಿಪೂರ್ಣವಾದ ಉತ್ತರವಾಗಿರಲಿಲ್ಲ.

ಅಮೆರಿಕಾ ಅಧ್ಯಕ್ಷ ಬೈ ಡನ್‌ರವರು ಟೆಲಿ ಫ್ರಾಂಪ್ಟರ್ ಇಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮಾತನಾಡಿದರು. ಆದರೆ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅಕ್ಕ ಪಕ್ಕದಲ್ಲಿ ಟೆಲಿಫ್ರಾಂಪ್ಟರ್ ಇಟ್ಟುಕೊಂಡಿದ್ದರೂ ಆ ಪತ್ರಕರ್ತರ ಪ್ರಶ್ನೆಗೆ ಉತ್ತರವನ್ನು ಪ್ರಧಾನಿಗೆ ನೀಡಲು ಸಾಧ್ಯವಾಗಲಿಲ್ಲ.

ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ಅಮೆರಿಕದಲ್ಲಿ ಅದನ್ನು ಎದುರಿಸಬೇಕಾಯಿತು. ಅವರು ಪತ್ರಿಕಾಗೋಷ್ಠಿ ಎದುರಿಸಿದರೆ ಬಹುದೊಡ್ಡ ಸಂಗತಿ ಎಂಬಂತೆ ಅಲ್ಲಿಯ ಹಿರಿಯ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ. ಅಲ್ಲಿಯ ದೊಡ್ಡ ಮಾಧ್ಯಮಗಳು ಪ್ರಧಾನಿ ಮೋದಿ ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ಮಾಡಿದ್ದಾರೆ ಅಂತ ವರದಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನೇ ಕೇಳದ ಹಾಗೆ ಅಥವಾ ಅತ್ಯಂತ ಕಡಿಮೆ ಪ್ರಶ್ನೆಗಳನ್ನು ಕೇಳುವ ಹಾಗೆ ಮಾಡುವುದಕ್ಕೆ ಭಾರತದ ಹಿರಿಯ ಅಧಿಕಾರಿಗಳು ಅಮೆರಿಕಾದ ಹಿರಿಯ ಅಧಿಕಾರಿಗಳೊಂದಿಗೆ ಎಷ್ಟು ಹೆಣೆಗಾಡಿರಬಹುದು ಅಂತ ಊಹಿಸಿದರೆ ಬೇಜಾರಾಗುತ್ತೆ. ಕೊನೆಗೆ ಉಭಯ ನಾಯಕರು ಒಟ್ಟು ಎರಡು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ಹೇಳಲಾಯಿತು.

ರಾಜ್ಯ ಸಚಿವರಾಗಿದ್ದು ‘ಗೋಲಿ ಮಾರೋ’ ಕೂಗಿನ ಬಳಿಕ ಸಂಪುಟ ಸಚಿವರಾದವರು, ಗೋ ರಕ್ಷಣೆಯ ನೆಪದಲ್ಲಿ ಲವ್ ಜಿಹಾದ್ ರೂಪದಲ್ಲಿ ದೇಶದಾದ್ಯಂತ ಮುಸಲ್ಮಾನರ ಗುಂಪು ಹಲ್ಲೆ ಲೂಟಿ ನಡೆಸಿದವರು. ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ದ್ವೇಷದ ಭಾಷಣಗಳಿಗೆ ಕಡಿವಾಣ ಹಾಕಲು ಎಚ್ಚರಿಸಿದರೂ ಕೂಡ ಸರಕಾರವು ಅವು ಯಾವುದಕ್ಕೂ ಕಿವಿಕೊಡದೆ ಇದ್ದಂತಹ ಸಂದರ್ಭದಲ್ಲಿ  ಸಂತರ ವೇಷದಲ್ಲಿ ಬಂದು ಬೀದಿ ಬೀದಿಗಳಿಲ್ಲ ನಿಂತು ‘ಮುಸಲ್ಮಾನರ ನರ ಮೇದ ನಡೆಸಿ’ ಅಂತ ಬಹಿರಂಗವಾಗಿ ಕರೆ ಕೊಟ್ಟವರು. ನಮಗೆ ಮುಸಲ್ಮಾನರ ವೋಟು ಬೇಡ, ಅವರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಬಿಜೆಪಿ ನಾಯಕರು, ಮಾಡದ ಅಪರಾಧಕ್ಕಾಗಿ ವೈದ್ಯರನ್ನು, ವಿದ್ವಾಂಸರನ್ನು, ಹೋರಾಟಗಾರರನ್ನು ಸಾಮಾಜಿಕ ಕಾರ್ಯಕರ್ತರನ್ನು, ಜೈಲಿಗಟ್ಟಿದ ಬಿಜೆಪಿ ಸರಕಾರಗಳು, ಅವರಿಗೆ ಜಾಮೀನು ಸಿಗದ ಹಾಗೆ ತಿಂಗಳುಗಟ್ಟಲೆ ಅಲ್ಲೇ ಇಟ್ಟವರು, ‘ಲವ್ ಜಿಹಾದ್, ಲ್ಯಾಂಡ್ ಜಿಹಾದ್ ನಡೀತಾ ಇದೆ’ ಎಂದು ಹೇಳಿಕೆ ಕೊಟ್ಟಿರುವ ಬಿಜೆಪಿ ಮುಖ್ಯಮಂತ್ರಿಗಳು, ಕಾನೂನಿನಲ್ಲಿ ಎಲ್ಲೂ ಇಲ್ಲದ ಬುಲ್ಡೊ ಝರ್ ಕಾರ್ಯಚರಣೆ ಮಾಡಿ ಎಲ್ಲರನ್ನ ಬೆಚ್ಚಿ ಬೀಳಿಸಿ ದವರು.

ಎಷ್ಟು ನಾಚಿಕೆ ಕೇಡಿನ ಸಂಗತಿಯೆಂದರೆ ಇಲ್ಲಿ ಬುಲ್ಡೊಝರ್ ಬಾಬಾ ಅಂತ ಹಾರಾಡಿದವರನ್ನು ನೋಡಿ ಅಮೆರಿಕದಲ್ಲಿ ಕಳೆದ ವರ್ಷ ಸ್ವಾತಂತ್ರ‍್ಯ ದಿನಾಚರಣೆಗೆ ಅಲ್ಲಿನ ಮೋದಿ ಭಕ್ತರು ಬುಲ್ ಡೋಝರ್ ಹಿಡ್ಕೊಂಡು ಅದರಲ್ಲಿ ಮೋದಿ ಹಾಗೂ ಆದಿತ್ಯನಾಥರ ಚಿತ್ರವನ್ನು ಅಂಟಿಸಿ ಮೆರವಣಿಗೆ ಮಾಡಿದರು.  ಅದಕ್ಕೆ ಅಲ್ಲಿ ಮೇಯರ್‌ಗಳು ಚೀಮಾರಿ ಹಾಕಿದರು. ಅದನ್ನು ಖಂಡಿಸಿ ಇಂತಹ ತಾರತಮ್ಯದ ಪ್ರದರ್ಶನಕ್ಕೆ ಇಲ್ಲಿ ಅವಕಾಶವಿಲ್ಲ. ನೀವು ಇದಕ್ಕಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು. 

ಕಿರುಕುಳ ನೀಡುವುದನ್ನು ಗುರಿಯಾಗಿಸಿ ಕಾನೂನು ಜಾರಿಗೆ ತಂದ ಬಿಜೆಪಿ ಮುಖ್ಯಮಂತ್ರಿಗಳು, ಇವರೆಲ್ಲರೂ ಒಟ್ಟಿಗೆ ಸೇರಿ ಅಮೇರಿಕಾದಲ್ಲಿ ಪ್ರಧಾನಿ ಮೋದಿಯವರ ಪ್ರಶ್ನೆಗೆ ಉತ್ತರಿಸದ ಹಾಗೆ ಮಾಡಿಬಿಟ್ಟದ್ದು ಮಾತ್ರವಲ್ಲ ನಮ್ಮ ಈ ದೇಶಕ್ಕೆ ಅಮೇರಿಕಾದಲ್ಲಿ ಅವಮಾನ ಮಾಡಿಬಿಟ್ಟರು. ಅವರ ಅಮೆರಿಕ ಭೇಟಿಯ ಹೊಳಪನ್ನ ಮಣ್ಣು ಪಾಲು ಮಾಡಿಬಿಟ್ಟರು. ಧರ್ಮದ, ಸಂಸ್ಕೃತಿಯ, ದೇಶದ ಹೆಸರಲ್ಲಿ ಜನರಲ್ಲಿ ದ್ವೇಷ ಬಿತ್ತಿಸಿದರೆ, ಅನುಮಾನ ಹರಡಿಸಿದರೆ, ಸುಳ್ಳು ಪ್ರಸಾರ ಮಾಡಿಸಿದರೆ, ಅಮಾಯಕರಿಗೆ ಹಿಂಸೆ ಮಾಡಿದರೆ ಮೋದಿ ಬೆಂಬಲಿಗರಿಗೆ ಇಲ್ಲಿ ಖುಷಿ ಆಗಬಹುದು. ಆದರೆ ವಿಶ್ವ ವೇದಿಕೆಯಲ್ಲಿ ಅದರಿಂದ ದೇಶಕ್ಕೆ ಹಾಗೂ ದೇಶದ ಪ್ರಧಾನಿಗೆ ಅದೆಷ್ಟು ಅಪಮಾನವಾಯಿತು. ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಟೆಲಿಫ್ರಾಂಪ್ಟರ್ ಇದ್ದು ಪ್ರಧಾನಿ ತೀರಾ ಕಳಪೆ ಉತ್ತರ ಕೊಟ್ಟಿದ್ದಾರೆ. ಒಂದು ಜಾಗತಿಕ ವೇದಿಕೆಯಲ್ಲಿ ಇಂತಹ ಕಳಪೆ ನಿರ್ವಹಣೆ ಸ್ವಿಕಾರಾರ್ಹವಲ್ಲ.

ಕಾಂಗ್ರೆಸ್ ನಾಯಕ ಪವನ್ ಖೇರಾರವರು ‘ಪ್ರಧಾನಿ ಮೋದಿ ಈ ದೇಶದಲ್ಲಿ ಯಾಕೆ ಪತ್ರಿಕಾ ಗೋಷ್ಠಿ ಮಾಡೋದಿಲ್ಲ’ ಎಂಬುದು ಈಗ ಅರ್ಥ ಆಗುತ್ತೆ ಅಂತ ಹೇಳಿದ್ದಾರೆ. ಈಗ ಮೋದಿಗೆ ಅಮೇರಿಕ ಭೇಟಿಯು ಇಂತಹ ದ್ವೇಷ ಭಕ್ತ ಅಭಿಮಾನಿಗಳಿಂದ ದೇಶಕ್ಕೆ ಮತ್ತೆ ಕೆಟ್ಟ ಹೆಸರು ಬಂದಿದೆ. ಆದರೆ ಇದನ್ನೆಲ್ಲ ಇಲ್ಲಿನ ಆಂಕರ್‌ಗಳು ಹಾಗೂ ಚಾನೆಲ್‌ಗಳು ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಹಾಗೂ ದೇಶಕ್ಕೆ ಆಗಿರುವ ಅವಮಾನದ ಬಗ್ಗೆ ಏನೂ ಹೇಳೋದಿಲ್ಲ.
ಶ್ವೇತಭವನದಲ್ಲಿ ಈ ಪ್ರಶ್ನೆಯನ್ನು ಬಳಿಕ ಕೇಳಲಾಯಿತು. ಅದಕ್ಕಿಂತ ಮೊದಲು ನ್ಯೂಯಾರ್ಕ್‌ ನ ಬೀದಿಗಳಲ್ಲಿ ಕೇಳಲಾಯಿತು. ಅಲ್ಲಿ ಅನಿವಾಸಿ ಭಾರತೀಯರ ಗುಂಪು ವಾಷಿಂಗ್‌ಟನ್ ನಿಂದ ನ್ಯೂಯಾರ್ಕ್ ವರೆಗೆ ವಿವಿಧ ವಿಷಯಗಳ ಕುರಿತು ಅಲ್ಲಿನ ಬೀದಿಗಳಲ್ಲಿ ಪ್ರಧಾನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿತ್ತು.  ಭಾರತದಲ್ಲಿ ನರೇಂದ್ರ ಮೋದಿ ಸರಕಾರ ಅಲ್ಪಸಂಖ್ಯಾತರ ವಿರೋಧಿ ಧೋರಣೆಯನ್ನ ಅದರ ವೈಫಲ್ಯವನ್ನ ಅಲ್ಲಿ ಪ್ರಶ್ನೆ ಮಾಡಲಾಯಿತು. “ಉಮರ್ ಖಾಲಿದ್ ರನ್ನು ಯಾಕೆ ಬಿಡುಗಡೆ ಮಾಡಲಿಲ್ಲ? ಮಹಿಳಾ ಕುಸ್ತಿ ಪಟುಗಳು ಯಾಕೆ ಮುಷ್ಕರಕ್ಕೆ ಕುಳಿತುಕೊಂಡಿದ್ದರು. ಮಣಿಪುರದಲ್ಲಿ ಯಾಕೆ ಹಿಂಸಾಚಾರ ನಿಲ್ಲುತ್ತಿಲ್ಲ.” ಇಂತಹ ಹಲವು ಪ್ರಶ್ನೆಗಳನ್ನೊಳಗೊಂಡ ಪ್ರತಿಭಟನಾ ಟ್ರಕ್ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿತ್ತು. ಆದರೆ ಈ ಭಟ್ಟಂಗಿ ಮೀಡಿಯಾ ಈ ಟ್ರಕ್ ಅನ್ನು ಎಲ್ಲಿಯೂ ತೋರಿಸಲಿಲ್ಲ. ಮೋದಿ ಸರಕಾರ ಭಾರತದಲ್ಲಿ ನಿಷೇಧಿಸಿದ ಬಿಬಿಸಿಯ ಸಾಕ್ಷ ಚಿತ್ರವನ್ನು ಸಹ ಅಲ್ಲಿ ಬೀದಿಯಲ್ಲಿ ತೋರಿಸಲಾಯಿತು. ಅಮೆರಿಕಾದಲ್ಲಿ ನೆಲೆಸಿರುವ ಮಣಿಪುರದ ಜನರು ಅಲ್ಲಿಯ ಅನ್ಯಾಯದ ವಿರುದ್ಧ ಬ್ಯಾನರ್‌ಗಳೊಂದಿಗೆ ಬಂದಿದ್ದರು, ಅಮೇರಿಕ ಕಾಂಗ್ರೆಸ್‌ನ 75 ಸಂಸದರು ಬೈಡನ್‌ಗೆ ಪತ್ರ ಬರೆದು “ಭಾರತದಲ್ಲಿ ಪತ್ರಿಕಾ ಸ್ವಾತಂತ್ರ‍್ಯನವನ್ನು ಯಾಕೆ ಹತ್ತಿಕ್ಕಲಾಗುತ್ತದೆ ಅಂತ ಮೋದಿಯವರನ್ನು ಕೇಳಿ, ಎಂದಿದ್ದಾರೆ. 

ಭಾರತದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯುತ್ತಾ ಇದೆ, ತಾರತಮ್ಯ ಮಾಡಲಾಗುತ್ತಿದೆ. ಅದು ಯಾಕೆ ನಿಲ್ಲುತ್ತಾ ಇಲ್ಲ ಎಂದು ಕೇಳಿ” ಅಂತ ಅಮೆರಿಕಾದ ಸಂಸತ್ತಿನ ಹಲವು ಪ್ರತಿನಿಧಿಗಳು ಆ ಪತ್ರದಲ್ಲಿ ಹೇಳಿದ್ದಾರೆ. ಈಗ ಎಂದಿನಂತೆ ಮೋದಿ ಬೆಂಬಲಿಗ ಪಡೆ ಅದೆಲ್ಲಾ ಉದ್ದೇಶಪೂರ್ವಕವಾಗಿ ಕೇಳಿದಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳು ಅಂತ ಹೇಳಿದ್ದಾರೆ. ಅವರಿಗೆ ಹೀಗೆ ಹೇಳೋದು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ. ಅವರ ಬಳಿ ನಿಜಕ್ಕೂ ಬೇರೆ ಉತ್ತರನೂ ಇಲ್ಲ. ಅವರ ಈ ದ್ವೇಷ ಭಕ್ತಿ ಪ್ರಧಾನಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರ ತಂದಿತ್ತು. ನಮ್ಮ ದೇಶಕ್ಕೆ ಅವಮಾನ ಆಗಿ ಹೋಯಿತು. ಇಷ್ಟು ಸಾಲದ್ದಕ್ಕೆ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಬಹುಸಂಖ್ಯಾತ ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಮೋದಿ ಭೇಟಿ ವೇಳೆ ಪ್ರಸ್ತಾಪಿಸುವಂತೆ ಅವರು ಅಮೇರಿಕಾ ಅಧ್ಯಕ್ಷ ಬ್ರೆಡನ್ ರವರಿಗೆ ಸಲಹೆಯನ್ನು ನೀಡಿದ್ದಾರೆ. ಮೋದಿಯವರ ಜೊತೆ ಚರ್ಚೆಗೆ ಅವಕಾಶವಿದ್ದರೆ ‘ನೀವು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಶ್ರಮ ಪಡದಿದ್ದರೆ ಭಾರತ ಹಿಂದೆ ಸರಿಯುವ ಸಾಧ್ಯತೆಗಳಿವೆ’ ಅಂತ ಹೇಳಿದ್ದಾರೆ. ಅಮೇರಿಕಾದ ಅಧ್ಯಕ್ಷರಾಗಿದ್ದಾಗ ಒಬಾಮ ಅತ್ಯಂತ ಆಪ್ತಮಿತ್ರರಾಗಿದ್ದ ‘ಮೋದಿ ಬರಾಕ್’ ಎಂದೇ ಕರೆಯುತ್ತಿದ್ದ ಒಬಾಮ ಹೀಗೆ ಹೇಳಿಬಿಟ್ಟಿದ್ದಾರೆ. 

ಭಾರತದಲ್ಲಿ ಪ್ರಧಾನಿಯೇ ಗಲಭೆ ಮಾಡುವವರನ್ನು  ಉಡುಪಿನಿಂದಲೇ ಗುರುತಿಸಬಹುದು ಅಂತ ಹೇಳುವುದು, ಅಮೇರಿಕಾದ ಪತ್ರಿಕಾಗೋಷ್ಠಿಯಲ್ಲಿ ನಮ್ಮಲ್ಲಿ ಯಾವುದೇ ತಾರತಮ್ಯ ಇಲ್ಲವೇ ಇಲ್ಲ ಅಂತ ಹೇಳುವುದು. ಇನ್ನು ಕಾಶ್ಮೀರ್ ಫೈಲ್ ಎಂಬ ಸುಳ್ಳು ಸಿನೇಮಾಗಳನ್ನು ಪ್ರಧಾನಿಯೇ ವೇದಿಕೆಗಳಲ್ಲಿ ನಿಂತು ಹೊಗಳಿ ಪ್ರಚಾರ ಮಾಡುವುದು. ಅಮೇರಿಕಾದಲ್ಲಿ ‘ನಾವು ಯಾವುದೇ ಧರ್ಮ ಜಾತಿಯಂತ ಬೇಧ ಭಾವ ಮಾಡುವುದಿಲ್ಲ ಅಂತ ಹೇಳುವುದು ಇದು ಎಂತಹ ದ್ವಂದ್ವ ನಿಲುವು ಅಲ್ಲವೇ?

✍️ಮುಹಮ್ಮದ್ ಮರಕಡ