ಸನ್ಮಾರ್ಗ ವಾರ್ತೆ
ಮುಂಬೈ,ಅ.16: ರಿಸರ್ವ್ ಬ್ಯಾಂಕ್ ಕ್ರಮ ಎದುರಿಸುತ್ತಿರುವ ಪಂಜಾಬ್ ಆಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿಎಂಸಿ)ನಲ್ಲಿ ಹಣ ಠೇವಣಿ ಇಟ್ಟ ಇನ್ನೊಬ್ಬ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಫತ್ತಾಮಲ್ ಪಂಜಾಬಿ(59) ಗುರುವಾರ ಮಧ್ಯರಾತ್ರೆ ಹೃದಯಾಘಾತದಿಂದ ಮೃತಪಟ್ಟರು. ಪಿಎಂಸಿ ಬ್ಯಾಂಕಿನಲ್ಲಿ ಭಾರೀ ಮೊತ್ತ ಠೇವಣಿ ಇಟ್ಟಿದ್ದು ಹಣ ಹಿಂಪಡೆಯವುದಕ್ಕೆ ಆಗುವುದಿಲ್ಲ ಎನ್ನುವ ಮಾನಸಿಕ ತುಮುಲ ಅವರ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಪಿಎಂಸಿ ಬ್ಯಾಂಕ್ನಲ್ಲಿ ಹಣ ಇಟ್ಟ ಓಷಿಯಾರ ನಿವಾಸಿ ಸಂಜಯ್ ಗುಲಾಟಿ(51) ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದದರು. ಪಿಎಂಸಿ ಬ್ಯಾಂಕಿನಲ್ಲಿ ಅವರು 90 ಲಕ್ಷ ರೂಪಾಯಿ ಇರಿಸಿದ್ದರು. 24 ಗಂಟೆಯೊಳಗೆ ಪಿಎಂಸಿ ಬ್ಯಾಂಕಿನ ಇಬ್ಬರು ಠೇವಣಿದಾರರು ಮೃತಪಟ್ಟಿದ್ದಾರೆ.
ಸಂಜಯ್ ಜೆಟ್ ಏರ್ವೇಸ್ ದಿವಾಳಿಯೆದ್ದದ್ದರಿಂದ ಕೆಲಸ ಕಳಕೊಂಡಿದ್ದರು. ಬ್ಯಾಂಕಿನಲ್ಲಿ ಇಟ್ಟ ಹಣವೊಂದೇ ಅವರ ಕುಟುಂಬದ ಜೀವನಾಧಾರವಾಗಿತ್ತು. ಭಿನ್ನ ಸಾಮರ್ಥ್ಯದ ಮಗನ ಸಹಿತ ಇಬ್ಬರು ಮಕ್ಕಳು ಮತ್ತು ಪತ್ನಿ ತಂದೆ ತಾಯಿ ಅವರ ಕುಟುಂಬದಲ್ಲಿ ಅವರನ್ನು ಆಶ್ರಯಿಸಿದ್ದಾರೆ. ಸೋಮವಾರ ಬ್ಯಾಂಕ್ ವಿರುದ್ಧ ಧರಣಿಯಲ್ಲಿ ಪಾಲ್ಗೊಂಡು ಮನೆಗೆ ಬಂದ ಇವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.












