ಪಾಪ್ಯುಲರ್ ಫ್ರಂಟ್ ಜೊತೆ ಸಂಬಂಧ ಆರೋಪ: ಪೊಲೀಸ್ ಅಮಾನತು, ತನಿಖೆಗೆ ಆದೇಶ

0
207

ಸನ್ಮಾರ್ಗ ವಾರ್ತೆ

ಕೊಚ್ಚಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜೊತೆ ಸಂಬಂಧ ಇದೆ ಎಂದು  ಆರೋಪಿಸಿ ಎರ್ನಾಕುಲಂನಲ್ಲಿ ಪೊಲೀಸ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಎರ್ನಾಕುಲಂ ಜಿಲ್ಲೆಯ ಕಾಲಡಿ ಪೊಲೀಸ್ ಸ್ಟೇಷನ್ ಸಿವಿಲ್ ಪೊಲೀಸ್ ಆಫೀಸರ್ ಝಿಯಾದ್ ರನ್ನು ತನಿಖೆಗಾಗಿ ಅಮಾನತಿನಲ್ಲಿರಿಸಲಾಗಿದೆ‌.

ಪಾಪ್ಯುಲರ್ ಫ್ರಂಟ್ ಕರೆ ನೀಡಿದ್ದ ಹರತಾಳದ ದಿನ ಕೆಎಸ್‌ಆರ್‌ಟಿಸಿ ಬಸ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಝಿಯಾದ್ ಸಂಬಂಧಿ ಯುವಕ ಸೇರಿದಂತೆ ಮೂವರನ್ನು ಪೆರುಂಬವೂರು ಪೊಲೀಸರು ಬಂಧಿಸಿದ್ದರು. ಝಿಯಾದ್, ಬಂಧಿತರನ್ನು ಭೇಟಿ ಮಾಡಿ ಆಹಾರ ಒದಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಅವರಿಗೆ ಜಾಮೀನು ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದಾಗಿ, ಜಿಲ್ಲಾ ಪೊಲೀಸ್ ವರಿಷ್ಠ ವಿವೇಕ್ ಕುಮಾರ್ ನೀಡಿರುವ ಅಮಾನತು ವರದಿಯಲ್ಲಿ ಈ ಕುರಿತು ಗಮನ ಸೆಳೆಯಲಾಗಿದೆ.

ಪಾಪ್ಯುಲ್ ಫ್ರಂಟ್ ಕಾರ್ಯಕರ್ತರ ನಂಬರ್‌ಗಳು  ಫೋನ್‍ನಲ್ಲಿ ಸೇವ್ ಮಾಡಿದ್ದು, ಕೆಲವೊಮ್ಮೆ ಅವರೊಂದಿಗೆ ಮಾತಾಡುತ್ತಿದ್ದರೆಂಬ ಆರೋಪವೂ ಇವರ ಮೇಲಿದೆ. ಈ ಆರೋಪಗಳ ಕುರಿತು ವಿವರವಾದ ತನಿಖೆ ನಡೆಯುತ್ತಿದ್ದು, ತನಿಖೆಯ ಹೊಣೆಯನ್ನು ಡಿವೈಎಸ್‍ಪಿಗೆ ವಹಿಸಲಾಗಿದೆ.