“ಪಾಕಿಸ್ತಾನ ತನಗೆ ವೀಸಾ ನಿರಾಕರಿಸಿಲ್ಲ”: ಕಾಲ್ನಡಿಗೆಯಲ್ಲಿ ಹಜ್‌ಗೆ ಹೊರಟ ಶಿಹಾಬ್ ಚೊಟ್ಟೂರು‌ ಸ್ಪಷ್ಟನೆ

0
274

ಸನ್ಮಾರ್ಗ ವಾರ್ತೆ

ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂಬ ಸುದ್ದಿಯನ್ನು ಕಾಲ್ನಡಿಗೆಯಲ್ಲಿ ಹಜ್‌ಗೆ ಹೊರಟಿರುವ ಶಿಹಾಬ್ ಚೊಟ್ಟೂರು ನಿರಾಕರಿಸಿದ್ದಾರೆ.

“ಪಾಕಿಸ್ತಾನ ತನಗೆ ವೀಸಾ ನಿರಾಕರಿಸಿಲ್ಲ ಮತ್ತು ಕೆಟಗರಿಯಲ್ಲಿ ಬಂದ ಸಮಸ್ಯೆಯ ಕಾರಣದಿಂದಾಗಿ ತಡೆ ಉಂಟಾಗಿದೆ” ಎಂದವರು ಯೂಟ್ಯೂಬ್ ಮತ್ತು ಫೇಸ್ ಬುಕ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ನನಗೆ ಈಗ ಅನುಮತಿಸಿರುವ ಟೂರಿಸ್ಟ್ ವಿಸಾ ಒಂದು ಗಂಟೆಯ ಒಳಗೆ ಲಭಿಸುತ್ತಿತ್ತು. ಆದರೆ, ನನಗೆ ಬೇಕಿರುವುದು ಟ್ರಾನ್ಸಿಟ್ ವಿಸಾ. ಟೂರಿಸ್ಟ್ ವೀಸಾದಲ್ಲಿ ತೆರಳಿದರೆ ನಾನು ಪಾಕಿಸ್ತಾನಕ್ಕೆ ತೆರಳಿ ಮರಳಿ ಭಾರತಕ್ಕೆ ಬರಬಹುದು. ಆದರೆ, ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಇರಾನ್‌ಗೆ ಹೋಗಬೇಕಾದರೆ ಟ್ರಾನ್ಸಿಟ್ ವೀಸಾ ಬೇಕಾಗಿದೆ.

ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿ ಇರಾನಿನ ತಪ್ತಾನ್ ಗಡಿಯ ಮೂಲಕ ತನಗೆ ಇರಾನಿಗೆ ಪ್ರವೇಶಿಸಬೇಕಿದೆ ಮತ್ತು ಇದಕ್ಕಾಗಿ ವಿದೇಶಾಂಗ ಸಚಿವಾಲಯದ ಒಂದು ದಾಖಲೆ ಕೂಡ ಬೇಕಿದೆ. ಅದು ಲಭ್ಯವಾದರೆ ಟ್ರಾನ್ಸಿಟ್ ವೀಸಾ ಕೂಡ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಮೊದಲು ನನಗೆ ಇರಾಕ್ ಮತ್ತು ಇರಾನ್‌ಗಳು ಮೂರು ತಿಂಗಳ ವೀಸಾವನ್ನು ನೀಡಿತ್ತು. ಆದರೆ ಈಗ ಅದನ್ನು ಒಂದು ವರ್ಷದ ವೀಸಾ ಆಗಿ ಪರಿವರ್ತಿಸಲಾಗಿದೆ. ಸೌದಿ ಕೂಡ ಒಂದು ವರ್ಷದ ವೀಸಾವನ್ನು ನೀಡಿದೆ ಎಂದವರು ಹೇಳಿದ್ದಾರೆ.

ಪಾಕಿಸ್ತಾನವು ಶಿಹಾಬ್‌ಗೆ ವೀಸಾ ನಿರಾಕರಿಸಿದೆ ಮತ್ತು ಪಾಕಿಸ್ತಾನ ಪ್ರವೇಶಿಸಲು ಸಾಧ್ಯವಾಗದೆ ಪಂಜಾಬಿನ ವಾಘಾ ಗಡಿಯಲ್ಲಿ 16 ದಿನಗಳಿಂದ ಶಿಹಾಬ್ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿತ್ತು

ಜೂನ್ 2ರಂದು ಶಿಹಾಬ್ ಹಜ್ ಕರ್ಮಕ್ಕಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದರು ಅಕ್ಟೋಬರ್ 5ರಂದು ಈ ಕಾಲ್ನಡಿಗೆ ಯಾತ್ರೆಗೆ 126 ದಿನಗಳು ಸಂದಿವೆ. ಸೆಪ್ಟೆಂಬರ್ ಏಳರಂದು ಪಂಜಾಬ್ ತಲುಪಿದ ಶಿಹಾಬ್ ಈಗ ವಾಘಾ ಗಡಿಯಲ್ಲಿದ್ದಾರೆ.