ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಅನ್ವಯ್ ನಾಯಿಕ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ ಅರ್ನಬ್ ಗೋಸ್ವಾಮಿಗೆ ಬೆಂಬಲ ಸೂಚಿಸಿದ ಕೇಂದ್ರ ಸಚಿವರನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಿ ಕೊಂದ ಸರಕಾರದ ಭಾಗವಾದ ಸಚಿವರು ತುರ್ತು ಪರಿಸ್ಥಿತಿಯೆಂದು ಹೇಳಿ ಬೊಬ್ಬೆ ಹೊಡೆಯುವುದು ಅತಿಶಯವಾಗಿದೆ.
ಬಿಹಾದ ಚುನವಣೆ ನಡೆಯುತ್ತಿರುವಾಗ ಅವರು ಸರಿಯಾಗಿ ತೊಂದರೆಯಲ್ಲಿ ಸಿಲುಕಿದ್ದಾರೆ ಎಂದು ಇದು ಸ್ಪಷ್ಟಪಡಿಸುತ್ತಿದೆ ಎಂದು ಭೂಷಣ್ ಟ್ವೀಟ್ ಮಾಡಿದ್ದಾರೆ.
ಯಾಕೆ ನನ್ನ ಬಲಿಪಶುಗಳು ನನಗೆ ಸಹಾಯ ಮಾಡುವುದಿಲ್ಲ ಎಂದು ಬರೆದು ಒಂದು ಕಾರ್ಟೂನ್ ಇನ್ನೊಂದು ಟ್ವೀಟ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಸಹಾಯಕ್ಕಾಗಿ ಮೊರೆಯಿಡುತ್ತಿರುವ ಅರ್ನಾಬ್ ಗೋಸ್ವಾಮಿಯ ಕಾರ್ಟೂನ್ ಅದು. ಅರ್ನಬ್ರನ್ನು ಬಂಧಿಸಿದ ಮುಂಬೈ ಪೊಲೀಸರ ಕ್ರಮ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು.
ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ, ಪ್ರಕಾಶ್ ಜಾವೇಡ್ಕರ್, ರವಿಶಂಕರ್ ಪ್ರಸಾದ ಮುಂತಾದವರು ಅರ್ನಾಬ್ಗೆ ಬೆಂಬಲ ನೀಡಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ರ ಅಭಿವ್ಯಕ್ತಿ, ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭದ ವಿರುದ್ಧ ಅಧಿಕಾರ ದುರುಪಯೋಗ ಇದೆಂದು ಅಮಿತ್ ಶಾ ಹೇಳಿದ್ದಾರೆ.












