ಅರ್ನಬ್ ಗೋಸ್ವಾಮಿ ಬಂಧನ: ಮಹಾರಾಷ್ಟ್ರ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಅಕ್ಷಿತಾ ನಾಯಿಕ್

0
94

ಸನ್ಮಾರ್ಗ ವಾರ್ತೆ

ಮುಂಬೈ: ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ್ದಕ್ಕಾಗಿ ಮುಂಬೈ ಪೊಲೀಸರಿಗೆ ಅನ್ವಯ್ ನಾಯಿಕ್‍ರ ಪತ್ನಿ ಅಕ್ಷಿತಾ ಕೃತಜ್ಞತೆ ಸೂಚಿಸಿದ್ದಾರೆ. ಅರ್ನಬ್ ಬಂಧನದ ನಂತರ ಅಕ್ಷಿತಾ ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದರು. ಈ ದಿನ ನನ್ನ ಜೀವನದಲ್ಲಿ ಬಂದುದಕ್ಕೆ ಮಹಾರಾಷ್ಟ್ರ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಾನು ಬಹಳ ಸಹನೆಯಿಂದ ಕಾದೆ. ನನ್ನ ಪತಿ, ಅತ್ತೆ ಮರಳಿ ಬರುವುದಿಲ್ಲ ಆದರೂ ಈಗಲೂ ಅವರು ನನಗಾಗಿ ಬದುಕಿದ್ದಾರೆ ಎಂದು ಅಕ್ಷಿತಾ ಹೇಳಿದರು.

ಇಂಟೀರಿಯಲ್ ಡಿಸೈನರ್ ಆಗಿದ್ದ ಅನ್ವಯ್ ನಾಯಿಕ್, ತಾಯಿ ಕುಮುದಾ ನಾಯಿಕ್ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಮುಂಬೈಯ ವಸತಿಯಿಂದ ಅರ್ನಬ್‍ರನ್ನು ಪೊಲೀಸರು ಬಂಧಿಸಿದ್ದಾರೆ. ರಿಪಬ್ಲಿಕ್ ಟಿವಿಯ ಕಚೇರಿಯ ಇಂಟಿರೀರಿಯರ್ ಡಿಸೈನಿಂಗ್ ಮಾಡಿದ್ದಕ್ಕಾಗಿ ಹಣ ಕೊಡದೆ ಅವರ ಉದ್ಯಮ ನಷ್ಟ ಅನುಭವಿಸಿತು ಎಂದು ಅನ್ವಯ್ ನಾಯಿಕ್ ಆತ್ಮಹತ್ಯೆ ವೇಳೆ ಪತ್ರ ಬರೆದಿಟ್ಟಿದ್ದರು.

ಮೂರು ಕಂಪೆನಿಗಳ ಮಾಲಕರು ತನಗೆ ಕೊಡಬೇಕಾದ ಹಣ ಕೊಡದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು. ರಿಪಬ್ಲಿಕ್ ಟಿವಿಯ ಟೆಲಿವಿಷನ್ ಜರ್ನಲಿಸ್ಟ್ ಅರ್ನಾಬ್ ಗೋಸ್ವಾಮಿ, ಐಕಾಸ್ಟ್ ಎಕ್ಸ್/ಸ್ಕೀಮಿಡಿಯದ ಫಿರೋಝ್ ಶೇಖ್, ಸ್ಮಾಟ್ ವರ್ಕ್ಸರ್ಸ್‌ನ ನಿತೀಶ್ ಸರ್ದಾ ತನಗೆ ಹಣ ಬಾಕಿ ಇಟ್ಟಿದ್ದಾರೆ. ಎಂದು ಅನ್ವಯ್ ಹೇಳಿದ್ದರು. ಮೂರು ಕಂಪೆನಿಗಳಿಂದ ಯಥಾ ಪ್ರಕಾರ 83 ಲಕ್ಷ, 4 ಕೋಟಿ, 55 ಲಕ್ಷ ರೂಪಾಯಿ ಹಣ ಬರಬೇಕಾಗಿದೆ ಎಂದು ಪತ್ರದಲ್ಲಿ ಬರೆದಿದ್ದರು.

ತನಿಖೆಯಲ್ಲಿ ಅನ್ವಯ್‍ರ ಕಂಪೆನಿ ಕಂಕೋಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಭಾರೀ ಸಾಲದಲ್ಲಿದೆ ಒಪ್ಪಂದ ಮಾಡಿಕೊಂಡವರಿಗೆ ಹಣ ಮರಳಿಸಲು ಕಷ್ಟಪಡುತ್ತಿದೆ ಎಂದು ತಿಳಿದು ಬಂದಿತ್ತು. ಮುಂಬೈಯ ಕೆಲವು ಗುತ್ತೆದಾರರು ಅನ್ವಯ್‍ಗೆ ಬೆದರಿಕೆ ಹಾಕಿದ್ದನ್ನೂ ಪೊಲೀಸರು ಪತ್ತೆಹಚ್ಚಿದ್ದರು. ಅದರೆ ಪತ್ರದ ಆರೋಪವನ್ನು ಗೋಸ್ವಾಮಿ ನಿರಾಕರಿಸಿ ಹಣ ಕೊಟ್ಟಿದ್ದೇನೆ ಎಂದು ವಾದಿಸಿದ್ದರು.

ಅನ್ವಯ್‍ರ ಸಾವಿನ ನಂತರ ಕೇಸು ದಾಖಲಿಸಲಾಗಿದ್ದರೂ ಅರ್ನಬ್ ವಿರುದ್ಧ ಸಾಕ್ಷ್ಯವಿಲ್ಲ ಎಂದು ಹೇಳಿ 2019ರಲ್ಲಿ ರಾಯಗಡ ಪೊಲೀಸರು ತನಿಖೆ ಕೊನೆಗೊಳಿಸಿದ್ದರು. ನಂತರ 2020 ಮೇಯಲ್ಲಿ ಅನ್ವಯರ್ ಪುತ್ರಿ ಪ್ರಕರಣವನ್ನು ಪುನಃ ತೆರೆಯಬೇಕೆಂದು ಆಗ್ರಹಿಸಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‍ರನ್ನು ಭೇಟಿಯಾಗಿದ್ದರು. ಮೇ ತಿಂಗಳಲ್ಲಿ ಗೃಹ ಇಲಾಖೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಮರು ತನಿಖೆಯ ವೇಳೆ ಅರ್ನಬ್‍ರನ್ನು ಬಂಧಿಸಲಾಗಿದೆ.

ತನಿಖೆಯ ದಿಕ್ಕು ತಪ್ಪಿಸಲು ಅರ್ನಬ್ ಯತ್ನಿಸಿದರೆಂದು ಅಕ್ಷಿತಾ ಮತ್ತು ಮಗಳು ಅದ್ನ್ಯಾ ಆರೋಪಿಸಿದ್ದರು. ನ್ಯಾಯ ಕೋರಿ ಪ್ರಧಾನಿ ಮತ್ತು ರಾಯಗಢ ಪೊಲೀಸ್ ಸುಪರಿಡೆಂಟ್‍ಗೆ ದೂರು ನೀಡಿದ್ದರು. ಆದರೆ ಅರ್ನಬ್ ಹಸ್ತಕ್ಷೇಪದಿಂದ ಪ್ರಕರಣವನ್ನು ಮುಚ್ಚಿಡಲಾಗಿತ್ತು. ಪ್ರಕರಣದಲ್ಲಿ ರಾಜಕೀಯ ಬೇಡ. ನಮಗೆ ನ್ಯಾಯಬೇಕೆಂದು ಅಕ್ಷಿತಾ ಹೇಳಿದರು.