ಕಾಂಗ್ರೆಸ್ ಪಾರ್ಟಿಯನ್ನು ಸಂಪೂರ್ಣ ಪುನರ್ ರಚಿಸಬೇಕು: ಪ್ರಶಾಂತ್ ಕಿಶೋರ್

0
339

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್‍ನಲ್ಲಿ ಬದಲಾವಣೆಯ ಒಂದು ಪಟ್ಟಿಯನ್ನೇ ಪ್ರಶಾಂತ್ ಕಿಶೋರ್ ಸೂಚಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾರ್ಟಿಯನ್ನು ಬಲಪಡಿಸಲು ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾಗಿರಬೇಕೆಂದು, ಪಾರ್ಟಿಯನ್ನು ಸಂಪೂರ್ಣ ಪುನರ್ರಚಿಸಬೇಕೆಂದು ಅವರು ಸೂಚಿಸಿದ್ದಾರೆ.

ಕಾಂಗ್ರೆಸ್‍ನೊಂದಿಗೆ ಎರಡು ಸಲ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನವೀಕರಣ ಫಾರ್ಮುಲಾ ತಯಾರಿಸಿ ನಾಯಕರ ಮುಂದಿಟ್ಟಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿವೆ. ರಾಹುಲ್ ಗಾಂಧಿ, ಸೋನಿಯ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಾರ್ಟಿಯ ಇತರ ಪ್ರಧಾನ ನಾಯಕರು ದೇಶಾದ್ಯಂತ ಪ್ರಯಾಣ ಬೆಳೆಸಿ ಸಾರ್ವಜನಿಕ ಅಭಿಪ್ರಾಯ ಹಂಚಿಕೊಳ್ಳುವ ವಿನಿಮಯ ನಡೆಸುವಂತೆ ಪ್ರಶಾಂತ್ ಕಿಶೋರ್ ಸೂಚಿಸಿದ್ದರು.

ಭ್ರಷ್ಟಾಚಾರ, ಹೊಣೆಗಾರಿಕೆ ‌ನಿಭಾಯಿಸಲು ವಿಫಲ, ಅಹಂ ಮುಂತಾದ ವಿಷಯದಿಂದ ಪಾರ್ಟಿಯನ್ನು ಮುಕ್ತಗೊಳಿಸಬೇಕು. ಪಾರ್ಟಿಯ ಪರಂಪರಾಗತ ಮೂಲಭೂತ ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂದು ಕಿಶೋರ್ ಹೇಳಿದರು. ಉತ್ತರಪ್ರದೇಶ, ಬಿಹಾರ ,ಒಡಿಸ್ಸ‌ಗಳಲ್ಲಿ ಸ್ವತಂತ್ರವಾಗಿ ಹಾಗೂ ತಮಿಳ್ನಾಡು, ಪ.ಬಂಗಾಳ, ಮಹಾರಾಷ್ಟ್ರಗಳಲ್ಲಿ ಸಖ್ಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಸೂಚಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವತ್ತ ಕಾಂಗ್ರೆಸ್ ಗಮನಹರಿಸಬೇಕೆಂದು ಕಿಶೋರ್ ಹೇಳಿದ್ದರೆಂದು ಮೂಲಗಳು ತಿಳಿಸಿವೆ.