ರಾಷ್ಟ್ರೀಯ ಹಜ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಕೇರಳದ ಎ.ಪಿ ಅಬ್ದುಲ್ಲ ಕುಟ್ಟಿ ಆಯ್ಕೆ

0
351

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇರಳ ಮೂಲದ ಎ.ಪಿ ಅಬ್ದುಲ್ಲ ಕುಟ್ಟಿಗೆ ರಾಷ್ಟ್ರೀಯ ಹಜ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈಗ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು ಹಜ್ ಕಮಿಟಿಯ ಸೆಕ್ಷನ್ ನಾಲ್ಕು(ಸ) ಪ್ರಕಾರ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಅಬ್ದುಲ್ಲ ಕುಟ್ಟಿ ಆಯ್ಕೆಯಾದರು.

ಮೂಲತಃ ಸಿಪಿಎಂನವರಾಗಿದ್ದ ಅಬ್ದುಲ್ಲ ಕುಟ್ಟಿ ನಂತರ ಕೇರಳದ ಕಾಂಗ್ರೆಸ್ಸಿನಲ್ಲಿಯೂ ಕಾರ್ಯನಿರ್ವಹಿಸಿದ್ದರು. ರಾಜ್ಯ ಸಚಿವರಾಗಿಯೂ ಅನುಭವ ಹೊಂದಿದ್ದು ಕೆಲವು ಹಗರಣಗಳಲ್ಲಿ ಇವರ ಹೆಸರು ತಳಕು ಹಾಕಿಕೊಂಡಿತ್ತು. ತದನಂತರ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿಯಲ್ಲಿ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸಲಾಗಿತ್ತು. ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಅವರಿಗೆ ವಹಿಸಿಕೊಟ್ಟಿತ್ತು. ಇದೀಗ ಅವರು ಹಜ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.