ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.5: ಪಾರ್ಲಿಮೆಂಟ್ ಸಮೀಪ ಮತ್ತು ರಾಷ್ಟ್ರಪತಿ ಭವನದ ಸಮೀಪ ಪ್ರಧಾನಿ ವಸತಿ ಕಟ್ಟಲು ಚಿಂತನೆ ನಡೆದಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ವಸತಿ ನಿರ್ಮಾಣಕ್ಕೆ ಟೆಂಡರ್‌ನಲ್ಲಿಯೂ ಪ್ರಧಾನಿ ವಸತಿ ಯೋಜನೆ ಇರಲಿಲ್ಲ. ಮೋದಿಯ ಕಚೇರಿಯ ವಿಶೇಷ ಆಸಕ್ತಿಯಲ್ಲಿ ನವೀಕರಣ ಯೋಜನೆಯ ಭಾಗವಾಗಿ ಪ್ರಧಾನಿ ವಸತಿ ನಿರ್ಮಾಣವನ್ನೂ ಜೋಡಿಸಲಾಗಿದೆ.
ಈಗಿರುವ ಪಾರ್ಲಿಮೆಂಟ್ ಕಟ್ಟಡವನ್ನು ಪ್ರಜಾಪ್ರಭುತ್ವದ ಮ್ಯೂಸಿಯಂ ಮಾಡಿ ಹೊಸ ಪಾರ್ಲಿಮೆಂಟ್ ನಿರ್ಮಾಣಕ್ಕೆ ಶಿಫಾರಸು ಮಾಡಲಾಗಿದೆ. ಪಾರ್ಲಿಮೆಂಟ್ ಕೇಂದ್ರ ಸೆಕ್ರಟರಿಯೇಟ್‌ನ ನವೀಕರಣದ ಹೊಣೆಯಿದ್ದ ಕೇಂದ್ರ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಾಗ ಪ್ರಧಾನಿ ವಸತಿ ಸೇರಿರಲಿಲ್ಲ.
ಐದು ಪ್ರಮುಖ ನಿರ್ಮಾಣ ಕಂಪೆನಿಗಳು ಯೋಜನೆಗೆ ಶಿಫಾರಸು ಮಾಡಿದ್ದವು. ಆದರೆ ಬಿಜೆಪಿ ಕಚೇರಿ ಕಟ್ಟಿದ ಎಚ್‌ಸಿಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಲೋಕ ಕಲ್ಯಾಣ್ ಮಾರ್ಗನಲ್ಲಿ ಈಗ ಪ್ರಧಾನಿ ಅಧೀಕೃತ ವಸತಿ ಇದೆ.
ಈಗ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಇರುವ ರಾಜಪಥದ ಎರಡು ಕಡೆಗಳಲ್ಲಿ ಪ್ರಧಾನಿ, ಗೃಹ, ರಕ್ಷಣ, ವಿತ್ತ ಸಚಿವರ ಕಚೇರಿಗಳಿವೆ. ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಕಟ್ಟಡಗಳು, ಪಾರ್ಲಿಮೆಂಟ್‌ನ ವಿವಿಧ ಸಚಿವಾಲಯಗಳ ಕಟ್ಟಡಗಳೂ ಇವೆ.












